ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಡಿದ್ದು, ಈ ದುರಂತದಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿರುವ ಮಾಹಿತಿಯನ್ನು ಭಾರತೀಯ ವಾಯುಸೇನಾ ಪಡೆ ದೃಢಪಡಿಸಿದೆ. ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ.
ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿ ತಮ್ಮ ಅಮೋಘ ಕರ್ತವ್ಯ ಚತುರತೆಯಿಂದ ಸೇವೆ ಸಲ್ಲಿಸುತ್ತಿದ್ದ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಮರಣದಿಂದ ನಾನು ನೊಂದಿದ್ದೇನೆ. ರಕ್ಷಣಾ ಇಲಾಖೆಯ ಮೂರು ಪಡೆಗಳ ಮಧ್ಯೆ ಸಮನ್ವಯ ಕಾದುಕೊಂಡು ರಾಷ್ಟ್ರದ ರಕ್ಷಣೆಗಾಗಿ ಕಂಕಣ ಕಟ್ಟಿ ಕೆಲಸ ಮಾಡುತ್ತಿದ್ದ ಜನರಲ್ ಬಿಪಿನ್ ರಾವತ್ ಶಿಸ್ತಿನ ಸಿಪಾಯಿಯಾಗಿ ತಾಯಿ ಭಾರತಿಯ ಸೇವೆ ಮಾಡುತ್ತಿದ್ದರು. ಇವರ ಮೃತ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶ್ರೀ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರು ಪ್ರಾರ್ಥಿಸಿದರು.
Be the first to comment