ಮನಮೋಹನ ಸಿಂಗ್ ಕೇವಲ 10ಪೈಸೆ ಬೆಲೆ ಏರಿಸಿದ್ದಾಗ ತಲೆ ಮೇಲೆ ಸಿಲಿಂಡರ್ ಹೊತ್ತು ಪ್ರತಿಭಟಿಸಿದ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆ: ಎಂ.ಎಲ್.ಸಿ. ಎಸ್.ಆರ್.ಪಾಟೀಲ ಟಾಂಗ್

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಅಂಬಿಗ್ ನ್ಯೂಸ್:

CHETAN KENDULI

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಬಂದಾಗೊಮ್ಮೆ ಯಾವುದಾದರೊಂದು ಪ್ರಕರಣ ಹೊರ ಬಿಳುತ್ತಾ ಬಂದಿದೆ. ಹಿಂದೇಯೂ 2008ರಲ್ಲಿ ಆಡಳಿತ ಮಾಡಿದ ಬಿಜೆಪಿ ಸರಕಾರ 5 ವರ್ಷದಲ್ಲಿಯೇ ಅದೇ ಸರಕಾರದಲ್ಲಿಯೇ ಮೂರು ಜನ ಸಿಎಂ ಆದ ಉದಾಹರಣೆಗಳಿವೆ. ಒಂದೇ ಸರಕಾರದಲ್ಲಿ ಮೂರು ಜನ ಸಿಎಂ ಆಗುವುದೆಂದರೆ ಬಿಜೆಪಿ ಆಡಳಿತದ ಬಗ್ಗೆ ತಿಳಿಯುತ್ತದೆ. ಈಗಾಗಲೇ ಜನರೇ ನಾವು ಮೋಸ ಹೋದೆವೂ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ರಾಜ್ಯ ಸರಕಾಕ್ಕೆ ಟಾಂಗ್ ನೀಡಿದ್ದಾರೆ. 

ರಾಜ್ಯ ಸಿಡಿ ಹಗರಣವನ್ನು ಬೇಧಿಸಲು ನ್ಯಾಯಾಲಯದಿಂದ ನೇಮಕಗೊಂಡ ಸ್ಪೇಷಲ್ ಇನ್ವೇಟಿಗೇಷನ್ ಟೀಮಗೆ ಮಾತ್ರ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ. ಆದರೆ ಈ ಎಸ್.ಐ.ಟಿ ನ್ಯಾಯಾಲಯದ ಮೂಲಕ ನೇಮಕಗೊಂಡಿಲ್ಲ ಎನ್ನುವುದು ಎಲ್ಲರೂ ತಿಳಿದುಕೊಳ್ಳಬೇಕಿದೆ. ಈ ಟೀಮ್ ಕೇವಲ ರಾಜ್ಯ ಗೃಹ ಸಚಿವರ ಆದೇಶದ ಮೇರೆಗೆ ಕಾರ್ಯನಿರ್ವಹಣೆ ಮಾಡುತ್ತದೆ. ಇದಕ್ಕೆ ದೂರು ದಾಖಲಿಸಿಕೊಳ್ಳವ ಯಾವುದೇ ಅಧಿಕಾರವಿಲ್ಲ ಎಂದು ಅವರು ಹೇಳಿದರು.



ಈ ಕುರಿತು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಬಿಜೆಪಿ ಸರಕಾರ ಸಿಡಿ ಸರಕಾರವಾಗಿದೆ. ಈ ಸರಕಾರದಲ್ಲಿ ಒಬ್ಬರ ಸಿಡಿ ಹೊರಗಡೆ ಬಂದ ತಕ್ಷಣ ಉಳಿದ 6 ಜನರು ದೇಶದ ನಾಲ್ಕೆ ಅಂಗ ಎಂದೇ ಹೇಳುವ ದೃಶ್ಯ ಮಾದ್ಯಮ,  ಪ್ರೀಂಟ್ ಮೀಡಿಯಾ ಸೇರಿದಂತೆ ಒಟ್ಟೂ 68 ಸಂಸ್ಥೆಗಳ ಮೇಲೆ ನ್ಯಾಯಾಲದಿಂದ ಸ್ಟೇಟ್ ತಂದಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರೆ ತನಿಖೆ ಚುರುಕಾಗಿ ಆಗುತ್ತಿತ್ತು. ಈಗ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಗರು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ. ಇದರಲ್ಲಿ ಯಾರೇ ಶಾಮಿಲಾಗಿದ್ದರೂ ಅವರ ಬಣ್ಣ ಬಯಲಾಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಆಡಳಿತದಿಂದ ಜನರು ಸಾಕಷ್ಟು ನಿರಾಶಿತರಾಗಿದ್ದಾರೆ:

ಕೇಂದ್ರದಲ್ಲಿ ಮೋದಿಯವರು ದೇಶಕ್ಕೆ ಅಚ್ಚೆದಿನ್ ಆಯೇಗಾ ಎಂದು ಹೇಳಿದ್ದರು. ಅದರಂತೆ ಸಾಕಷ್ಟು ಜನರು ಬಿಜೆಪಿಗೆ ಬೆಂಬಲಿಸಿದ್ದರು. ಆದರೆ ರಾಜ್ಯದ ಬಿಜೆಪಿ ಆಡಳಿತದಿಂದ ಜನರು ಸಿಡಿ ಸರಕಾರ ಎಂದು ಲೇವಡಿ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತದೆ ವಿನಃ ಇಳಿಕೆಯಾಗುತ್ತಿಲ್ಲ. ಹಿಂದೇ ಆರ್ಥಿಕ ತಜ್ಞರೆಂದೇ ಖ್ಯಾತರಾಗಿದ್ದ ಮನಮೋಹನ ಸಿಂಗ್ ಅವರು ಪೆಟ್ರೋಲ್ ಬೆಲೆಯಲ್ಲಿ 10 ಪೈಸೆ ಏರಿಕೆ ಮಾಡಿದ್ದಾಗ ಬಿಜೆಪಿಯ ಸಂಸದರು ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ್ದರು. ಆದರೆ ಈಗ ಅಂತಹ ಸಂಸದರು ಎಲ್ಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಅದರಂತೆ ಹಿಂದೆ ಸಾರ್ವಜನಿಕರು ಜೇಬಿನಲ್ಲಿ ಹಣವಿಟ್ಟುಕೊಂಡು ಕೈಚೀಲದಲ್ಲಿ ಸಾಮಗ್ರಿ ಖರಿದಿ ಮಾಡುತ್ತಿದ್ದರು. ಆದರೆ ಬಿಜೆಪಿ ಸರಕಾರ ಬಂದಿದ್ದು ಕೈಚೀಲದಲ್ಲಿ ಹಣವಿಟ್ಟುಕೊಂಡು ಜೆಬು ತುಂಬುವಷ್ಟು ಸಾಮಗ್ರಿ ಖರಿದಿ ಮಾಡುವಂತಾಗಿದೆ ಎಂದು ಅವರು ಲೇವಡಿ ಮಾಡಿದರು.

Be the first to comment

Leave a Reply

Your email address will not be published.


*