ರಾಜ್ಯ ಸುದ್ದಿಗಳು
ಮುದ್ದೇಬಿಹಾಳ(ವಿಜಯಪುರ):
ಗ್ರಾಮ ಪಂಚಾಯತ ಮೂಲಕ ಸಾಕಷ್ಟು ಸೌಲಭ್ಯಗಳನ್ನು ಮಾಡಬಹುದು. ಈಗಾಗಲೇ ಚುನಾಯಿತಗೊಂಡಿರುವ ಸದಸ್ಯರಿಗೆ ಇದರ ಬಗ್ಗೆ ತಿಳಿಸಿಕೊಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆ, ಅಹವಾಲು ಸ್ವೀಕಾರ ಕಾರ್ಯಕ್ರಮ ಹಾಗೂ ಚುನಾಯಿತ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸದಸ್ಯರಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಿಗೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಎಂ. ಎಲ್.ಎ. ಸೇರಿದಂತೆ ಇನ್ನಿತರ ಜನಪ್ರತಿನಿದಿಗಳಿಗೆ ನೀಡಲಾಗುತ್ತಿರು ಪಿಂಚಣಿಯನ್ನು ಗ್ರಾಮ ಪಂಚಾಯತ ಸದಸ್ಯರಿಗೂ ನೀಡುವಂತೆ ಮನವಿ ಮಾಡಲಾಗಿದ್ದು ಸರಕಾರ ಮಟ್ಟದಲ್ಲಿ ತೀರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.
ನಿಮ್ಮ ಪಂಚಾಯತಿಯನ್ನು ಮಾದರಿಯನ್ನಾಗಿಸಿ:
ಪಂಚಾಯತಿಯಲ್ಲಿನ ಮಹತ್ತರ ಯೋಜನೆಗಳನ್ನು ಸರಿಯಾಗಿ ಸದಬಳಕೆ ಮಾಡಿಕೊಂಡು ನಿಮ್ಮ ಪಂಚಾಯತಿಯನ್ನು ಮಾದರಿಯನ್ನಾಗಿಸುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಸನ್ಮಾನ:
ಮುದ್ದೇಬಿಹಾಳ ಹಾಗೂ ತಾಳಿಕೋಟೆಯ ಗ್ರಾಮ ಪಂಚಾಯತನಲ್ಲಿ ನೂತನವಾಗ ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ಸನ್ಮಾನಿಸಲಾಯಿತು.
ಪಕ್ಷತೀತವಾದ ಸನ್ಮಾನ ಸಮಾರಂಭ:
ನೂತನ ಸದಸ್ಯರಿಗೆ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಒಟ್ಟು 35 ಗ್ರಾಮ ಪಂಚಾಯತಿಯ ಸರ್ವ ಸದಸ್ಯರಿಗೂ ಸನ್ಮಾನ ಸಮಾರಂಭವನ್ನು ಮಾಡಲಾಯಿತು.
ಗೈರಾದ ಕೆಲ ಸದಸ್ಯರು:
ಮುದ್ದೇಬಿಹಾಳ ಹಾಗೂ ತಾಳಿಕೋಟೆಯ ಒಟ್ಟು 35 ಪಂಚಾಯತ ಸದಸ್ಯರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಸನ್ಮಾನ ಸಮಾರಂಭಕ್ಕೆ ಕೆಲ ಸದಸ್ಯರುಗಳು ಗೈರಾಗಿದ್ದು ಕಂಡು ಬಂದಿತು.
ಕಾರ್ಯಕ್ರಮ ನಡೆಸಲು ಯೋಗ್ಯವಲ್ಲದ ಸಭಾ ಭವನ:
ಮುದ್ದೇಬಿಹಾಳ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭಾವನವನ್ನು ನಿರ್ಮಿಸುವಲ್ಲಿ ತಂತ್ರಜ್ಞಾನದ ಬಳಕೆ ಮಾಡದ ಕಾರಣ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದ್ವನಿವರ್ಧಕ ಬಳಕೆ ಮಾಡಿದರೆ ಅತಿಥಿಗಳ ಧ್ವನಿ ಯಾರಿಗೂ ಸರಿಯಾಗಿ ಕೇಳುವುದಿಲ್ಲ. ಇದರ ಬಗ್ಗೆ ಸಂಭಂದಿಸಿದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ಕೆಲ ಪಂಚಾಯತಿ ಸದಸ್ಯರ ಆಗ್ರಹವಾಗಿದೆ.
Be the first to comment