ಜಿಲ್ಲಾ ಸುದ್ದಿಗಳು
ಭಟ್ಕಳ
ಬಿಜೆಪಿ ಭಟ್ಕಳ ಮಂಡಲದ ವತಿಯಿಂದ ಇಂದು (ದಿನಾಂಕ 22.10.2021 ಶುಕ್ರವಾರ) ಸಂಜೆ 4ಗಂಟೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಚಿತವಾಗಿ 100 ಕೋಟಿ ಲಸಿಕೆಯನ್ನು ದೇಶದ ಜನತೆಗೆ ಪೂರೈಸಿರುವ ಸಂಭ್ರಮದೊಂದಿಗೆ ಇದರ ಯಶಸ್ವಿಗೆ ಕಾರಣೀಕರ್ತರಾದ ಕರೋನ ವಾರಿಯರ್ಸ್ ಗಳಾದ ವೈದ್ಯರುಗಳಿಗೆ, ನರ್ಸ್ ಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಹೂವನ್ನು ನೀಡಿ ಅಭಿನಂದಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿಗಳಾದ ಚಂದ್ರು ಎಸಳೆ ಅವರು ಮಾತನಾಡಿ ಕೊರೋನಾ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ, ಲಸಿಕಾ ವಿಚಾರಣೆ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಗಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಡಲದ ಅಧ್ಯಕ್ಷರಾದ ಶ್ರೀ ಸುಬ್ರಾಯ ದೇವಾಡಿಗ ಅವರು ವೈದ್ಯ ಸಿಬ್ಬಂದಿಗಳನ್ನು ಸ್ವಾಗತಿಸಿ ಹೂವನ್ನು ನೀಡಿ, ಸಿಹಿ ವಿತರಣೆ ಮಾಡಿ, ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗೋವಿಂದ ನಾಯ್ಕ, ಮಂಡಲ ಪ್ರಭಾರಿಗಳಾದ ಶ್ರೀ ಪ್ರಶಾಂತ್ ನಾಯ್ಕ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ರವಿ ನಾಯ್ಕ, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀ ಸುರೇಶ್ ನಾಯ್ಕ, ವೈದ್ಯಾಧಿಕಾರಿಗಳಾದ ಸವಿತಾ ಕಾಮತ್ ಹಾಗೂ ವೈದ್ಯ ಸಿಬ್ಬಂದಿಗಳು, ಬಿಜೆಪಿ ಮಂಡಲ ಹಾಗೂ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment