ಜಿಲ್ಲಾ ಸುದ್ದಿಗಳು
ಮಂಗಳೂರು
ಮಂಗಳೂರು ಹೊರವಲಯದ ಪರಂಗಿಪೇಟೆ ಔಟ್ಪೋಸ್ಟ್ನಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಡಿಸಿಪಿ ಹರಿರಾಮ್ ಶಂಕರ್ ಪ್ರಯತ್ನಿಸಿದ್ದರು.ಅಡ್ಯಾರು ಬಳಿ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವೇಳೆ ದಾಳಿ ನಡೆಸಿದ್ದ ಡಿಸಿಪಿ ಹರಿರಾಮ್ ಶಂಕರ್ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಬೆನ್ನಟ್ಟಿ, ಪರಂಗಿಪೇಟೆ ಔಟ್ ಪೋಸ್ಟ್ ಬಳಿ ಲಾರಿ ಅಡ್ಡಗಟ್ಟಿದ್ದರು. ಈ ವೇಳೆ ಡಿಸಿಪಿ ಕಾರಿನ ಮೇಲೆ ಲಾರಿ ಹತ್ತಿಸಲು ಚಾಲಕ ಪ್ರಯತ್ನಿಸಿದ್ದ. ಬಳಿಕ ಔಟ್ಪೋಸ್ಟ್ನ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ.
ಮತ್ತೆ ಮರಳು ಸಾಗಣೆ ಲಾರಿ ಹಿಂಬಾಲಿಸಿದ್ದ ಡಿಸಿಪಿ ಹರಿರಾಮ್ ಸೂಚನೆಯಂತೆಎ ಪೊಲೀಸರು ಬಂಟ್ವಾಳದಲ್ಲಿ ಮರಳು ಲಾರಿ ವಶಕ್ಕೆ ಪಡೆದರು. ಲಾರಿ ಚಾಲಕ ಮತ್ತು ಲಾರಿಯನ್ನು ಹಿಂಬಾಲಿಸುತ್ತಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದರು.ಆರೋಪಿಗಳ ವಿರುದ್ಧ ಮರಳು ಕಳವು, ನಿರ್ಲಕ್ಷ್ಯದ ಚಾಲನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಮರಳುಗಳ್ಳರು ತಪ್ಪಿಸಿಕೊಂಡು ಹೋಗುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಿಕ್ಕಿದೆ.
Be the first to comment