ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳ್ ತಾಲೂಕಿನ ಹೇಬಳೆ ಗ್ರಾಮ್ ಪಂಚಾಯತ್ ನಲ್ಲಿ ಪಂಚಾಯತ್ ನಿಧಿ ಹಣ ದುರುಪಯೋಗ ಆಗಿದೆ ಮತ್ತು ಹೇಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರು , ಅಧಿಕಾರಿಗಳು ಪಂಚಾಯತ್ ನಿಧಿಯನ್ನು ದುರುಪಯೋಗ ಮಾಡಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ನಿನ್ನೆ ನಡೆದ ಹೇಬಳೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯನ್ನು ಪಂಚಾಯತ್ ಸದ್ಯಸ್ಯ ಮಾದೇವ್ ನಾಯ್ಕ ನೇತೃತ್ವದಲ್ಲಿ 11 ಜನ ಗ್ರಾಮ ಪಂಚಾಯತ್ ಸದಸ್ಯರು ಬಹಿಸ್ಕರಿಸಿದ್ದಾರೆ. ಹೇಬಳೆ ಗ್ರಾಮ್ ಪಂಚಾಯತ್ ಸದಸ್ಯ ಮಾದೇವ್ ನಾಯ್ಕ ಮಾತನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಪಂಚಾಯತ್ ನಿಧಿಯನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿದ್ದಾರೆ , ಈ ಅವ್ಯವಹಾರ ಮತ್ತು ಬ್ರಷ್ಟಾಚಾರವನ್ನು ಮೇಲಾಧಿಕಾರಿಗಳ ತನಿಖೆ ನಡೆಸಬೇಕು ಎಂದು ಹೇಳಿದರು.ಹೇಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅವ್ಯವಹಾರ ಖಂಡಿಸಿ, ತನಿಖೆಗೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರೊಂದಿಗೆ ಹೇಬಳೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೇಬಳೆ ಗ್ರಾಮ ಪಬಚಾಯತ್ ಸದಸ್ಯ ಇಬ್ಬು ಅಲಿ ಅದಮ, ಕಲಿಮ್ ಖಾನ್ , ಲೀಲಾವತಿ,ಹೇಮಾವತಿ ನಾಯ್ಕ, ಪ್ರಭಾವತಿ ನಾಯ್ಕ, ಸಚಿನ್ ಮೊಗೇರ್, ಯಾಸ್ಮಿನ್ , ಅಮಿತಾ, ರುಕಿಯ, ಅಲಿ ಮಾಲಿಕ್ ಉಪಸ್ಥಿತರಿದ್ದರು.
ಸಾಮಾಜಿಕ ಹೋರಾಟಗಾರ ನಾಗೇಶ್ ನಾಯ್ಕ ಮಾತನಾಡಿ ಹೇಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರ ಮತ್ತು ಅಧಿಕಾರಿಗಳ್ ಭ್ರಷ್ಟಾಚಾರವನ್ನು ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Be the first to comment