ಭಟ್ಕಳ ತಾಲೂಕಿನ ಹೇಬಳೆ ಪಂಚಾಯತ ವ್ಯಾಪ್ತಿಯ ಗಾಂಧಿನಗರ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

 

ಭಟ್ಕಳ

CHETAN KENDULI

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ಗಾಂಧಿನಗರದಿAದ ಬಬ್ಬನಕಲ್ಲು, ಜಾಲಿಯನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ಥಿಗೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು ರಸ್ತೆಯ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.ರಸ್ತೆಯಲ್ಲಿ ಜಮಾಯಿಸಿದ ಸುತ್ತಮುತ್ತಲಿನ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು. ಕೂಡಲೇ ನಮಗೆ ಹೊಸ ರಸ್ತೆ ನಿರ್ಮಿಸಿ ಕೊಡಬೇಕು, ನಮಗೆ ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದರು. ನಂತರ ಸುದ್ದಿಗಾರರ ಮುಂದೆ ಸಮಸ್ಯೆಯನ್ನು ಹೇಳಿಕೊಂಡ ಪ್ರತಿಭಟನಾಕಾರರು. ಇದು ಹೆಬಳೆ ಜಾಲಿಯ ನಡುವಿನ ಮುಖ್ಯ ರಸ್ತೆಯಾಗಿದೆ

ಸುತ್ತಮುತ್ತಲಿನ 300ಕ್ಕೂ ಹೆಚ್ಚು ಮನೆಗಳ ಜನರು ಇದೇ ರಸ್ತೆಯಲ್ಲಿ ಓಡಾಡಬೇಕಾಗಿದೆ. ಆದರೆ ಕಳೆದ 10-15 ವರ್ಷಗಳಿಂದ ರಸ್ತೆ ಹಾಗೆಯೇ ಇದೆ. ಹೊಂಡಗAಡಿಗಳಿAದಾಗಿ ಜನರು ನಿತ್ಯವೂ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಯನ್ನಂತೂ ಹೇಳತೀರದಾಗಿದೆ. ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ರಸ್ತೆ ಹೊಂಡಗಳಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದರೆ ಮತ್ತಷ್ಟು ನೋವನ್ನು ಅನುಭವಿಸಿಕೊಂಡೇ ಮುಂದಕ್ಕೆ ಸಾಗಬೇಕು. 3 ಎಮ್. ಎಲ್.ಎ.ಗಳು ಬಂದು ಹೋದರೂ ಸಮಸ್ಯೆ ಬಗೆ ಹರಿದಿಲ್ಲ. ಪಂಚಾಯತ ಅಧಿಕಾರಿಗಳು ಈ ರಸ್ತೆ ತಮಗೆ ಸಂಬAಧಿಸಿದ್ದಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಶಾಸಕರ ಗಮನಕ್ಕೂ ತರಲಾಗಿದ್ದು, ಇದೇ ರಸ್ತೆಯಲ್ಲಿಓಡಾಡುವ ಶಾಸಕರಿಗೆ ರಸ್ತೆ ಅಧೋಗತಿಯ ಮಾಹಿತಿ ಇದೆ, ಕಳೆದ ಕೆಲವು ತಿಂಗಳುಗಳಿAದ ಶಾಸಕರು ಹಣ ಬಿಡುಗಡೆಯಾಗಿದೆ ಎಂದು ಹೇಳಿಕೊಂಡು ಬರುತ್ತಿರುವರಾದರೂ, ಇನ್ನೂ ರಸ್ತೆ ಸುಧಾರಣೆ ಕಂಡಿಲ್ಲ. ನಿರಂತರ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹಾಳಾಗಿದೆ. ವಾಹನ ಚಾಲನೆ ಇರಲಿ, ನಡೆದಾಡುವುದಕ್ಕೂ ಕಷ್ಟವಾಗುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು ನಮ್ಮ ನೋವಿಗೆ ಸ್ಪಂದಿಸಬೇಕು, ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ ದೂರವಾಣಿ ಕರೆಯಲ್ಲಿ ಮಾತನಾಡಿ ಭಟ್ಕಳ ಹೆಬಳೆ ಗಾಂಧಿನಗರ ಜಾಲಿ ಸಂಪರ್ಕ ರಸ್ತೆಯ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಹಣ ಮಂಜೂರಾಗಿದೆ. ಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಮಂಜುನಾಥ ನಾಯ್ಕ ಗಣಪತಿ ನಾಯ್ಕ, ಮಾದೇವ ನಾಯ್ಕ, ದೇವಿದಾಸ ನಾಯ್ಕ ರಾಮರಾಜ ನಾಯ್ಕ, ದೇವರಾಜ ನಾಯ್ಕ, ರಾಜೇಶ ನಾಯ್ಕ, ಕೇಶವ ನಾಯ್ಕ, ವಸಂತ ನಾಯ್ಕ, ವೆಂಕಟೇಶ ನಾಯ್ಕ, ಹರೀಶ ನಾಯ್ಕ, ಆನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*