ರಾಜ್ಯ ಸುದ್ದಿಗಳು
ಶಿರಸಿ
ಅರಣ್ಯ ಹಕ್ಕು ಕಾನೂನಿನ ಅರ್ಥೈಯಿಸುವಿಕೆಯಲ್ಲಿ ಗೊಂದಲವಿದ್ದು, ಕಾನೂನಿನ ಮೂಲ ಆಶಯದ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಹಕ್ಕು ನೀಡಲು ಸಹಕಾರ ಸೂಚಿಸಲಾಗುವುದು ಎಂದು ವಿಧಾನ ಸಭಾ ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.ಅವರು ಇಂದು ಬೆಂಗಳೂರಿನ, ಕಬ್ಬನ್ ಪಾರ್ಕ ಆವರಣ, ನೌಕರ ಭವನದಲ್ಲಿ ಅರಣ್ಯವಾಸಿಗಳ ಹೋರಾಟ 30 ವರ್ಷ ಸ್ಮರಣ ಸಂಚಿಕೆ ಬಿಡುಗಡೆಮಾಡುತ್ತಾ ಮಾತನಾಡುತ್ತಿದ್ದರು.ಅರಣ್ಯ ಸಂಪತ್ತು ಅರಣ್ಯವಾಸಿಗಳಿಂದ ರಕ್ಷಿಸಲ್ಪಟ್ಟದ್ದು ಇರುತ್ತದೆ. ಅರಣ್ಯಭೂಮಿ ಅರಣ್ಯವಾಸಿಗಳ ಜೀವನಕ್ಕೆ ಅನಿವಾರ್ಯ ಎಂದು ಅವರು ಹೇಳುತ್ತಾ ಇಲಾಖೆಯವರ ಮಾನವೀಯತೆಗೆ ಮೀರಿ ಕಾರ್ಯ ಜರುಗಿಸಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಾಗುವುದು. ಅರಣ್ಯನಾಶವು ಅರಣ್ಯವಾಸಿಗಳಿಂದಾಗುವುದಿಲ್ಲ, ಅರಣ್ಯ ಲೂಟಿಗಾರರಿಂದ ಆಗುವ ಕ್ರಮವಾಗಿದೆ, ಅರಣ್ಯವಾಸಿಗಳ ಮೂಲಭೂತ ಸೌಲಭ್ಯಕ್ಕೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಸಭೆ ಜರುಗಿಸಲಾಗುವುದೆಂದು ಅವರು ಹೇಳಿದರು.
ಜನಪರ ಹೋರಾಟ ಅವಶ್ಯ:ಜನರ ಸಮಸ್ಯೆಗಳ ಪರಿಹಾರಕ್ಕೆ ಜನಪರ ಹೋರಾಟಗಾರರಿಂದ ಮಾತ್ರ ಸಾಧ್ಯ. ಭೂಮಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ, ಮುಗ್ದ ಅರಣ್ಯವಾಸಿಗಳ ಮೇಲೆ ದಬ್ಬಾಳಿಕೆಗೆ ಒಕ್ಕಟ್ಟಿನ ಧ್ವನಿ ಅವಶ್ಯ, ಕಾನೂನು ಪರಿಪಾಲನೆ ಮಾಡದ ಅಧಿಕಾರಿಗಳು ದೇಶದೋಹ್ರ ಕಾರ್ಯಕ್ಕೆ ಸಮಾನ ಎಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ಹೇಳಿದರು.ಭೂ ಕಬಳಿಕೆ ಕಾಯಿದೆ ರದ್ದುಗೊಳಿಸಿ:ಸರಕಾರ ಸಾಗುವಳಿ ರೈತನಿಗೆ ಭೂಮಿ ಹಕ್ಕು ನೀಡಬೇಕು ವಿನಃ ಭೂ ಕಬಳಿಕೆಯ ನಿಷೇದ ಕಾಯಿದೆ ತಂದು ರೈತ ವಿರೋಧ ನೀತಿ ಪ್ರಕಟಿಸುತ್ತಿರುವುದು ದುರದೃಷ್ಠಕರ. ಅರಣ್ಯಭೂಮಿ ಸಾಗುವಳಿ ಹಕ್ಕಿಗೆ ಹೋರಾಟದ ಧ್ವನಿ ಅಡಿಯಲ್ಲಿ 30 ವರ್ಷ ಹೋರಾಟ ಜರುಗಿಸಿರುವುದು ರಾಷ್ಟ್ರಮಟ್ಟದ ಹೋರಾಟಕ್ಕೆ ಮಾದರಿಯಾಗಿದೆ ಎಂದು ಮಾಜಿ ಕಾನೂನು ಸಚಿವ ಹಾಗೂ ಶಾಸಕ ಹೆಚ್.ಕೆ ಪಾಟೀಲ್ ಹೇಳಿದರು.“ಸ್ವತಂತ್ರ ಪೂರ್ವದ ಹೋರಾಟದಲ್ಲಿ ಗಾಂಧೀಜಿ ಅವರಿಗೆ ಹೇಚ್ಚಿನ ಬೆಂಬಲ ಅರಣ್ಯವಾಸಿಗಳೇ ನೀಡಿದ್ದು, ಭೂ ರೈತ ಅರಣ್ಯವಾಸಿಗಳ ಹಕ್ಕು ಸರಕಾರ ನಿರ್ಲಕ್ಷ್ಯಿಸುತ್ತಿರುವುದು ಖೇದಕರ. ಹೋರಾಟಕ್ಕೆ ಮತ್ತು ಅರಣ್ಯ ಭೂಮಿ ಹಕ್ಕಿಗೆ ಪರಿಸರವಾದಿಗಳ ವಿರೋಧ ನೀತಿ ಖಂಡನಾರ್ಹ.”
– ಪ್ರಕಾಶ ಕಮರಡಿ (ರಾಜ್ಯ ಸಂಚಾಲಕ ಐಕ್ಯ ರೈತ ಹೋರಾಟ ಸಮಿತಿ)“ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಸ್ವತಂತ್ರ ಸಂಗ್ರಾಮದಂತೆ ಹಾಗೂ ಇತ್ತೀಚಿನ ಡೆಲ್ಲಿ ರೈತ ಹೋರಾಟದ ಮಾದರಿಯಲ್ಲಿ ಜರುಗಿಸಬೇಕು.”– ಸಿರಿಮನೆ ನಾಗರಾಜ (ಉಪಾಧ್ಯಕ್ಷರು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ)ಕಾರ್ಯಕ್ರಮದಲ್ಲಿ ರಾಜ್ಯ ಹೋರಾಟ ಶಾಸಕತೀ.ನ ಶ್ರೀನಿವಾಸ ಮೂರ್ತಿ ಶಿವಮೊಗ್ಗ, ರಾಮು ಕೊಡಗು, ಶಂಕರ ವಾಲ್ಮೀಕಿ ಗದಗ, ಚಿದಾನಂದ ರಾಜ್ಯ ರೈತ ಅನ್ನದಾತ ಸಂಘ, ಮುಂತಾದವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಮಂಜುನಾಥ ಮರಾಠಿ, ದೇವರಾಜ ಮರಾಠಿ, ಪಾಂಡುರಂಗ ನಾಯ್ಕ, ಶಿವಾನಂದ ಜೋಗಿ, ಸೀತಾರಾಮ ನಾಯ್ಕ ಬೋಗ್ರಿಬೈಲ್, ಇಬ್ರಾಹಿಂ ಗೌಡಳ್ಳಿ, ಯಾಕೂಬ ಬೆಟ್ಕುಳಿ, ಭೀಮ್ಸಿ ವಾಲ್ಮೀಕಿ, ಶಿವಾಜಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಹೋನ್ನಾವರ ಅಧ್ಯಕ್ಷ ಸತೀಶ ತಾಂಡೇಲ್ ನಿರ್ವಹಿಸಿದರು. ಸಭೆಯಲ್ಲಿ ರಾಜ್ಯಾದ್ಯಂತ ಎರಡು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿದ್ದರು.ರಾಜ್ಯಮಟ್ಟದ ಅರಣ್ಯವಾಸಿಗಳ ಚಿಂತನ ಕೂಟದ ನಿರ್ಣಯಗಳು:ರಾಜ್ಯಾದ್ಯಂತ ಅರಣ್ಯವಾಸಿಗಳ ಹಕ್ಕಿಗಾಗಿ ‘ಅರಣ್ಯವಾಸಿಗಳನ್ನ ಉಳಿಸಿ- ಜಾಥಾ’ ಹಮ್ಮಿಕೊಳ್ಳುವುದು.ಸಾಂಘೀಕ ಹೋರಾಟದ ಮೂಲಕ ಅರಣ್ಯಭೂಮಿ ಸರಕಾರ ಮೇಲೆ ಒತ್ತಡ ತರುವುದು.ಅರಣ್ಯವಾಸಿಗಳ ಹಕ್ಕಿಗೆ ಹಕ್ಕು ಕಾಯಿದೆಯಲ್ಲಿನ ಅರ್ಜಿಗಳನ್ನು ಶಿಘ್ರ ವಿಲೇವಾರಿ ಮಾಡಿ ಅಗ್ರಹಿಸಿ ಶಾಸಕರ ಮನೆಯ ಮುಂದೆ ಧರಣಿ ಮಾಡುವುದು.ಅರಣ್ಯ ಭೂಮಿ ಹಕ್ಕು ಭಿಕ್ಷೆಯಲ್ಲ ಅಥವಾ ದಾನವಲ್ಲ, ಭೂಮಿ ಹಕ್ಕು ಸಂವಿಧಾನಾತ್ಮಕ ಹಕ್ಕು, ಭೂಮಿ ಹಕ್ಕಿಗೆ ಜನಾಂದೋಲನ ಜರುಗಿಸುವುದು.ಮುಂದಿನ ಒಂದು ತಿಂಗಳಿನಲ್ಲಿ ಅರಣ್ಯವಾಸಿಗಳ ಪರ ನಿಲುವು ಮಂಡಿಸಲು ಉನ್ನತ ಮಟ್ಟದ ಸಭೆ ಜರುಗಿಸುವುದು.
Be the first to comment