ರಾಜ್ಯ ಸುದ್ದಿಗಳು
ವಿಜಯನಗರ:
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಹುತೇಕ ರೋಗಗ್ರಸ್ಥ ಗ್ರಾಮ ವಾಗಿದ್ದು ನೈರ್ಮಲ್ಯತೆ ಕಾಣೆಯಾಗಿದೆ ಗ್ರಾಪಂ ಅಭಿವೃಸದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಎಂದು ಗ್ರಾಮ ಮುಖಂಡರು ದೂರಿದ್ದಾರೆ.
ಇಲ್ಲಿಯ ಜನಗಳು ಗೋಳು ಕೇಳೋರು ಯಾರು ಇಲ್ಲದಂತಾಗಿದೆ. ಪ್ರತಿ ವರ್ಷವೂ ಹತ್ತಾರು ಲಕ್ಷ ಗಟ್ಟಲೆ ಗ್ರಾ.ಪಂಗೆ ಅನುದಾನ ದೊರಕತ್ತಿದೆಯಾದರೂ ಸ್ವಚ್ಛತೆ ಮರೀಚಿಕೆಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸದಸ್ಯರು ಗ್ರಾಮಸ್ಥರ ಅಹವಾಲು ಆಲಿಸುತ್ತ ಸ್ಪಂಧಿಸುತಿಲ್ಲ, ನಿರ್ಲಕ್ಷ್ಯ ತೋರುತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುದಾನವಿದ್ರೂ ಗ್ರಾಮ ಸ್ವಚ್ಛತೆಗೆ ಗ್ರಾಮದ ಕೆಲವೆಡೆಗಳಲ್ಲಿ ಚರಂಡಿ ಹೂಳು ತುಂಬಿ ತ್ಯಾಜ್ಯ ಕೊಳೆತು, ಸಾಕ್ರಾಮಿಕ ರೋಗ ಹರಡುವಂತಾಗಿದೆ ದುರ್ನಾಥ ನಾರುತ್ತಿವೆ.ಹಕವೆಡೆ ಚರಂಡಿಗಳು ತುಂಬಿ ಮುಚ್ಚಿಹೋಗಿವೆ.
ಗ್ರಾಪಂ ಅಧಿಕಾರಿ ನಿರ್ಲಕ್ಷ್ಯ ಖಂಡಿಸಿ ಹಲವು ತಾಪಂ ಅಧಿಕಾರಿಗೆ ದೂರು ನೀಡಲಾಗಿದೆಯಾದರೂ ನಿರ್ಲಕ್ಷ್ಯತೆ ವಿರೋಧಿಸಿ ದೂರು ನೀಡಿದರೂ ಕೂಡ ತಾಪಂ ಅಧಿಕಾರಿ ಪಿಡಿಓ ವಿರುದ್ಧ ಶಿಸ್ಥು ಕ್ರಮ ಕೈಗೊಳ್ಳೋ ಧೈರ್ಯಮಾಡುತ್ತಿಲ್ಲ.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ,ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ಥು ಕ್ರಮಕೈಗೊಳ್ಳಬೇಕಿದೆ ಎಂದು ಗ್ರಾಮಸ್ತರು ಈ ಮೂಲಕ ಕೋರಿದ್ದಾರೆ.
ಕರೋನಾ ಮಹಾ ಮಾರಿಯ ರೌದ್ರನರ್ತನ ಸಂದರ್ಭದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು,ಗ್ರಾಮಸ್ಥರು ಆತಂಕದಿದ್ದಾರೆ ಮತ್ತು ಪಿ.ಡಿ.ಓನಿರ್ಲಕ್ಷ್ಯತೆಗೆ ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತಿದ್ದಾರೆ.ಜಿಪಂ ಮು.ಕಾ.ನಿ.ಅಧಿಕಾರಿಗಳು ಪರಾಮರ್ಶಿಸಿ ಶೀಘ್ರವೇ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕಿದೆ.
Be the first to comment