ರಾಜ್ಯ ಸುದ್ದಿ
ಯಲ್ಲಾಪುರ: ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವೆಂದರೆ ಅಮೇರಿಕಾದ ಪ್ರತಿಷ್ಠಿತ ಲ್ಯುಸಿಯಾನಾ ವಿಶ್ವವಿದ್ಯಾಲಯದಿಂದ ಚಿಕ್ಕಮಕ್ಕಳ ಎಂಡೋಕ್ರೈನಾಲಜಿ ಫೆಲೋಶಿಪ್ ಗೌರವವನ್ನು ತಾಲೂಕಿನ ಸಂಕದಗುಂಡಿಯ ಮೂಲದ ಡಾ. ಜಯಲಕ್ಷ್ಮಿ ನಾರಾಯಣ ಭಟ್ಟ,MBBS, MD, MPH ಇವರಿಗೆ ಪ್ರಧಾನ ಮಾಡಲಾಗಿದೆ. ಮಕ್ಕಳ ಮತ್ತು ಹದಿಹರೆಯದವರಲ್ಲಿ ಅಂತಃಸ್ರಾವಕ ಕಾಯಿಲೆಗಳು ಮತ್ತು ಮಧುಮೇಹ ಮೆಲ್ಲಿಟಸ್ ಹೊಂದಿರುವ ಸಂಶೋಧನೆ ಮತ್ತು ಕ್ಲಿನಿಕಲ್ ಆರೈಕೆಯಲ್ಲಿ ಎಂಡೋಕ್ರೈನಾಲಜಿ ತಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ. ಅದರಲ್ಲೂ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಫೆಲೋಶಿಪ್ ತುಂಬಾ ಸಂಕೀರ್ಣ ಪರೀಕ್ಷೆಯಾಗಿದ್ದು ಮೆಡಿಸಿನ್ ವಿಭಾಗದ ಕಠಿಣ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಅದರಲ್ಲಿ ಡಾ. ಜಯಲಕ್ಷ್ಮಿ ಭಟ್ಟ ಅವರು ಯಶಸ್ಸುಗಳಿಸಿ ಇದೀಗ ಅಲ್ಲಿನ ಮಕ್ಕಳ ಅಂತಃಸ್ರಾವ ತಜ್ಞೆಯಾಗಿ ಸಂಶೋಧನೆ ಮತ್ತು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಉಮ್ಮಚಗಿಯ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಜಿಲ್ಲೆಯ ಸಹಕಾರಿ ಧುರೀಣರಲ್ಲೊಬ್ಬ ಎಮ್. ಜಿ. ಭಟ್ಟ ಸಂಕದಗುಂಡಿ ಇವರ ತಮ್ಮನ ಮಗಳು. ಇವರ ತಂದೆ ನಾರಾಯಣ ಭಟ್ಟರು ಕೃಷಿ ಪದವೀಧರರು. ವಿಜಯಾ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿ ನಿವೃತ್ತರಾಗಿದ್ದಾರೆ. ತಾಯಿ ಲೀಲಾವತಿ ಭಟ್. ಜಯಲಕ್ಷ್ಮೀ ತಮ್ಮ MBBS ಪದವಿಯನ್ನು ವಿಜಯಪುರದ BLD ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗಳಿಸಿದ್ದಾರೆ. ನಂತರ ಅಮೆರಿಕಾದ ಜಾನ್ ಹಾಪ್ಕಿನ್ ವಿಶ್ವವಿದ್ಯಾಲಯದಿಂದ () ಅಲಬಾಮಾ ವಿಶ್ವವಿದ್ಯಾಲಯದಿಂದ MD ಪದವಿ ಪಡೆದಿದ್ದಾರೆ.ಬಾಲ್ಯದಿಂದಲೂ ಪ್ರತಿಭಾವಂತೆಯಾಗಿರುವ ಇವರು ಇದೀಗ ಚಿಕ್ಕಮಕ್ಕಳ ಅಂತಃಸ್ರಾವ ತಜ್ಞೆಯಾಗಿ ಪ್ರಪಂಚದ ಕೆಲವೇ ಪರಿಣಿತ ವೈದ್ಯರಾಗಿ ಗುರುತಿಸಿಲ್ಪಟ್ಟಿರುವದು ಜಿಲ್ಲೆಗೆ ಹೆಮ್ಮೆಯ ಸಂಗತಿಯೂ ಹೌದು. ಇವರು ಹಾಸಣಗಿಯ ಕೃಷಿಕ ಪರಮೇಶ್ವರ ಭಟ್ಟ ಮತ್ತು ಶಾಂತಾ ದಂಪತಿಗಳ ಮಗ ಡಾ. ರಾಮಚಂದ್ರ ಭಟ್ಟರನ್ನು ಲಗ್ನವಾಗಿದ್ದಾರೆ.
ಜಯಲಕ್ಷ್ಮಿಯವರ ಪತಿ ಡಾ. ರಾಮಚಂದ್ರ ಭಟ್ಟರೂ ಸಹ ಅಮೇರಿಕಾದ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಸೌತ್ ಅಲಾಬಾಮದಾ ಮಕ್ಕಳ ವಿಭಾಗದಲ್ಲಿ ನವಜಾತ ಶಿಶು ತಜ್ಞರಾಗಿ Neonatal-Perinatal medicine Fellowship ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ MBBS ಪದವಿಯನ್ನು ಹುಬ್ಬಳ್ಳಿಯ ಕಿಮ್ಮಲ್ಲಿ ಪಡೆದಿದ್ದು ನಂತರ ದೆಹಲಿಯ ಮೌಲಾನಾ ಅಜ್ಞಾದ ವೈದ್ಯಕೀಯ ಕಾಲೇಜಿನಿಂದ MD ಪಡೆದಿದ್ದಾರೆ. ನಂತರದಲ್ಲಿ ಇವರ ಪ್ರತಿಭೆಯನ್ನು ಗುರುತಿಸಿ ಅಮೇರಿಕಾದ ಮೇರಿ ಲ್ಯಾಂಡ್ ವಿಶ್ವವಿದ್ಯಾಲಯ ಇವರನ್ನು ಆಹ್ವಾನಿಸಿ ಅಲ್ಲಿ ಚಿಕ್ಕ ಮಕ್ಕಲ ತಜ್ಞರಾಗಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದರು. ನಂತರ ಇವರು ಅಲಾಬಾಮಾದ ವಿಶ್ವವಿದ್ಯಾಲಯದಿಂದ Neonatal-Perinatal medicine ತಜ್ಞರಾಗಿ ಇದೀಗ ಅಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ಅಕಲಿಕ ವಾಗಿ ಜನಿಸುವ ಶಿಶುಗಳ ಅಥವಾ ತೀವ್ರವಾಗಿ ಅನಾರೋಗ್ಯದ ನವಜಾತ ಶಿಶುಗಳಿಳ ಆರೋಗ್ಯದ ಕುರಿತು ವಿಶೇಷ ಕಾಳಜಿಯನ್ನು ವಹಿಸುವದು ಮತ್ತು ಹೆಚ್ಚಿನ ಅಪಾಯದ ಗರ್ಭಧರಿಸಿದ ತಾಯಂದರ ಆರೋಗ್ಯದ ಕುರಿತಾದ ಕಾಳಜಿಯನ್ನು ನಿಮೂನಾಟಾಲಜಿಪ್ಟ್ ವೈದ್ಯರು ನಿರ್ವಹಿಸುತ್ತಾರೆ. ಈ ಕುರಿತು ಇವರ ಅನೇಕ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿರುತ್ತವೆ.ಈ ಇಬ್ಬರೂ ವೈದ್ಯ ದಂಪತಿಗಳು ವೈದ್ಯಕೀಯ ರಂಗದಲ್ಲಿ ತಮ್ಮ ತಮ್ಮ ಸಾಧನೆಗಳಿಂದಲೇ ಮುಂದೆ ಬಂದಿರುವ ಪ್ರತಿಭಾನ್ವಿತರು. ಇವರ ಈ ಸಾಧನೆಗೆ ಇವರ ತಂದೆ ನಾರಾಯಣ ಭಟ್ಟ, ಪರಮೇಶ್ವರ ಭಟ್ ಮತ್ತು ಎಂ. ಜಿ. ಭಟ್ಟರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
Be the first to comment