ಬಾಗಲಕೋಟೆ:ಆಲಮಟ್ಟಿ ಆಣೆಕಟ್ಟೆಯ ಬಾಗಲಕೋಟೆ ನಗರದಲ್ಲಿ ಒಟ್ಟು 4 ಇ-ತ್ಯಾಜ್ಯ ಚಟುವಟಿಕೆ (ಗುಜರಿ ಅಂಗಡಿ) ಅಂಗಡಿಗಳ ಮೇಲೆ ಬಾಲಕಾರ್ಮಿಕ ಪತ್ತೆಗೆ ಇತ್ತೀಚೆಗೆ ದಾಳಿ ನಡೆಸಿ ತಪಾಸಣೆ ಕೈಗೊಳ್ಳಲಾಯಿತು. ತಪಾಸಣೆ ಸಂದರ್ಭದಲ್ಲಿ ಯಾವುದೇ ಬಾಲಕಾರ್ಮಿಕರು ಕಂಡುಬಂದಿರುವದಿಲ್ಲ. ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಬಾಲಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಸೂಚನಾಪತ್ರಗಳನ್ನು ವಿತರಿಸಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ತಿಳುವಳಿಕೆ ನೀಡಲಾಯಿತು.
ತಪಾಸಣೆ ತಂಡದಲ್ಲಿ ಕಾರ್ಮಿಕ ನಿರೀಕ್ಷಕ ಅವಿನಾಶ ನಾಯಕ್, ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಶಿಕ್ಷಣ ಇಲಾಖೆಯ ಬಿಆರ್‍ಸಿ ಗುಡೂರ, ಪೊಲೀಸ್ ಇಲಾಖೆಯ ಉಕ್ಕಲಿ, ತಾಲೂಕಾ ಅಲ್ಪಸಂಖ್ಯಾತರ ಇಲಾಖೆಯ ಕೊಲ್ಲೂರ ಇದ್ದರು.
Be the first to comment