“ರಾಜಕೀಯದಿಂದ ಹಿಜಾಬ್ ವಿವಾದ ಹೊರಗಿಡಿʼ ಮಾಜಿ ಶಾಸಕ ವೆಂಕಟಸ್ವಾಮಿ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ʼ ಮಕ್ಕಳಿಗೆ ಪೋಷಕರು ಕಲಿಸಿರುವ ಧರ್ಮದ ಆಧಾರದ ಮೇಲೆ ಮುಸ್ಲಿಂ ಸಮುದಾಯದ ಮಕ್ಕಳು ಹಿಜಾಬ್ ಧಾರಣೆ ಮಾಡುತ್ತಿದ್ದಾರೆ. ರಾಜಕೀಯದಿಂದ ಹಿಬಾಬ್ ವಿವಾದ ಹೊರಗಿಡಬೇಕು ಎಂದು ಮಾಜಿ ಶಾಸಕ ವೆಂಕಟಸ್ವಾಮಿ ಆಗ್ರಹಿಸಿದರು.ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು, ಹಿಜಾಬ್ ವಿವಾದ ಕರ್ನಾಟಕದಲ್ಲಿ ಹುಟ್ಟಿ ಇಡೀ ದೇಶವನ್ನು ಆವರಿಸುತ್ತಿದೆ ಇದೊಂದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.ಸ್ವತಂತ್ರ ಪೂರ್ವದಿಂದ ಹಿಡಿದು, ಇಂದಿನವರೆಗೂ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಹೊರಗಡೆ ಬಂದಾಗ ಹಿಜಾಬ್ ಸೇರಿದಂತೆ ಬುರ್ಕಾ ಧರಣೆ ಸಾಮಾನ್ಯವಾಗಿದ್ದು, ಸಮಾನತೆಯ ಹೆಸರಿನಲ್ಲಿ ದೊಡ್ಡ ವಿವಾದ ಹುಟ್ಟುಹಾಕಿ ರಾಜಕೀಯ ಲಾಭಕ್ಕೆ ನಾಯಕರು ಮುಂದಾಗುತ್ತಿದ್ದಾರೆ ಎಂದು ದೂರಿದರು.

ಕರಾವಳಿ ಭಾಗದಲ್ಲಿ ಈ ರೀತಿಯ ರಾಜಕೀಯ ಪಿತ್ತೂರಿ ನಡೆಯುತ್ತಿದೆ. ಸಂಘಟನೆಗೆ ಇದನ್ನು ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ ಇಂತಹ ಬೆಳವಣಿಗೆಗೆ ಕಡಿವಾಣವಾಗುವಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಸಣ್ಣ ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮವೆಂಬ ವಿಷ ಬೀಜ ಬಿತ್ತಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ದೊಡ್ಡ ಪೆಟ್ಟು ನೀಡಲು ಮುಂದಾಗುತ್ತಿದ್ದಾರೆ. ಮಕ್ಕಳಲ್ಲಿಯೇ ದೇವರುನ್ನು ಕಾಣಬೇಕು ಎಂಬುದೇ ನಮ್ಮ ಧರ್ಮ, ಅದನ್ನು ಅರ್ಥ ಮಾಡಿಕೊಂಡು ವಿವಾದಕ್ಕೆ ಅಂತ್ಯ ಹಾಡಬೇಕು ಎಂದರು.

ಈಗಾಗಲೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಅಂತದಲ್ಲಿದ್ದು, ನ್ಯಾಯಪೀಠ ನೀಡುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ, ಕುಂವೆAಪುರವರು ಹೇಳಿರುವ ರೀತಿ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಎಂಬAತೆ ಎಲ್ಲರೂ ಸಹೋದರ ಭಾವನೆಯಲ್ಲಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

Be the first to comment

Leave a Reply

Your email address will not be published.


*