ರೈತಸಂಪರ್ಕಕೆಂದ್ರದ ಕೃಷಿ ಅಧಿಕಾರಿಗೆ ರೈತ ಸಂಘಟನೆ ಮನವಿ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ರೈತ ಸಂಪರ್ಕ ಕೇಂದ್ರ ರೈತರಿಗೆ ಬೇಕಾಗಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಸರಿಯಾದ ಸಮಯಕ್ಕೆ ಪೂರೈಸುವ ನಿಟ್ಟಿನಲ್ಲಿ ಮುಂದುವರೆಯಬೇಕಾಗಿದೆ. ಕಳೆದ ವರ್ಷ 2018 19 ನೇ ಸಾಲಿನಲ್ಲಿ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಸರಿಯಾದ ಸಮಯಕ್ಕೆ ನೀಡದ ಕಾರಣ ರೈತರಿಗೆ ತೊಂದರೆಯಾಗಿದ್ದು, ಸರಿಯಾದ ಸಮಯಕ್ಕೆ ಬೀಜಗಳನ್ನು ಒದಗಿಸದೇ ಇರುವ ಕಾರಣ ರೈತರಿಗೆ ಬಹಳ ತೊಂದರೆ ಉಂಟಾಗಿದೆ.

CHETAN KENDULI

ಆದಕಾರಣ ಈ ಸಲ 2020 – 21 ನೇ ಸಾಲಿನ ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ತಕ್ಷಣ ರೈತರಿಗೆ ಬೇಕಾಗಿರುವ ಬಿತ್ತನೆಬೀಜ ರಸಗೊಬ್ಬರ ಸಿಂಪಡನೆ ಔಷಧಿ ಎಲ್ಲವನ್ನು ಸಕಾಲಕ್ಕೆ ಒದಗಿಸಿಕೊಡಬೇಕೆಂದು. ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಮಾಡಿದರು. ಸರಿಯಾದ ಸಮಯಕ್ಕೆ ಬಿತ್ತನೆಯ ಬೀಜ ಹಾಗೂ ಇನ್ನಿತರೆ ಸವಲತ್ತುಗಳು ವಿತರಿಸುವಲ್ಲಿ ವಿಳಂಬವಾದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಜಯ ಬಡಿಗೇರ್ ಅಧ್ಯಕ್ಷರು ತಾಲೂಕ ಘಟಕ ಮಸ್ಕಿ, ಶೇಠಪ್ಪ ಚೌಹಾಣ್ ಮೂಡಲದಿನ್ನಿ ತಾಂಡ ತಾಲೂಕ ಉಪಾಧ್ಯಕ್ಷರು, ಶಂಕ್ರಪ್ಪ ಅಡ್ಡೇದರ ತಾಲೂಕ ಪ್ರಧಾನ ಕಾರ್ಯದರ್ಶಿ, ಆಂಜನೇಯ ಮೂಚಿ ತಾಲೂಕ ಸಂಘಟನೆ ಕಾರ್ಯದರ್ಶಿ, ಕೃಷಿ ಅಧಿಕಾರಿ ಶಿವಶರಣ ಭೋವಿ, ಸಿಬ್ಬಂದಿಗಳಾದ ರಮೇಶ್ ಉಸ್ಕಿಹಾಳ, ಮಲ್ಲಪ್ಪ ಯು. ಉದ್ಬಾಳ, ಗದ್ಯೆಪ್ಪ ಮಸ್ಕಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*