ಪೌರಾಡಳಿತ ಸಚಿವರು ಮಾಡಬೇಕಿದ್ದ ಉದ್ಘಾಟನೆ ಪೌರಕಾರ್ಮಿಕರ ಕೈಯಲ್ಲಿ : ದೊಡ್ಡಬಳ್ಳಾಪುರ ನೂತನ ನಗರಸಭಾ ಕಟ್ಟಡ ಲೋಕಾರ್ಪಣೆ .

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

 

ದೊಡ್ಡಬಳ್ಳಾಪುರ 

CHETAN KENDULI

ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿ ಸರಿಸುಮಾರು 6.7 ಕೋಟಿ ವೆಚ್ಚದಲ್ಲಿ ನೂತನ ನಗರಸಭಾ ಕಟ್ಟಡವನ್ನು ನಿರ್ಮಿಸಿದ್ದು . ನೂತನ ಕಟ್ಟಡದ ಉದ್ಘಾಟನಾ ಕರ್ಯಕ್ರಮವು ಮಾರ್ಚ್ 16 ರಂದು ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿತ್ತು ಆದರೆ ಉದ್ಘಾಟನಾ ಸಮಾರಂಭಕ್ಕೆ ಸಂಜೆ 6 ಘಂಟೆ ಕಳೆದರೂ ಬಾರದ ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಮತ್ತು ಬೆಂಗಳೂರು ಗ್ರಾಮಂತರ ಉಸ್ತುವಾರಿ ಸಚಿವರಾದ ಡಾ ಕೆ ಸುಧಾಕರ್ ವಿರುದ್ಧ ವಿಧಾನಪರಿಷತ್ ಸದಸ್ಯ ಎಸ್. ರವಿ ಹಾಗೂ ದೊಡ್ಡಬಳ್ಳಾಪುರ ಶಾಸಕರಾದ ವೆಂಕಟರಮಣಯ್ಯ ಮತ್ತು ಸ್ಥಳೀಯ ಸಾರ್ವಜನಿಕರಿಂದ ನೂತನ ನಗರಸಭಾ ಕಟ್ಟಡದ ಎದುರು ಕೆಲಕಾಲ ಪ್ರತಿಭಟನೆ ನಡೆಸಲಾಯಿತು . 

ನಂತರ ವಿಧಾನಪರಿಷತ್ ಸದಸ್ಯರಾದ ಎಸ್ ರವಿ ನೇತೃತ್ವದಲ್ಲಿ ತಾಲ್ಲೂಕಿನ ಶಾಸಕರಾದ ಟಿ ವೆಂಕಟರಮಣಯ್ಯ ಹಾಗೂ ಕೆಲ ನಗರಸಭಾ ಸದಸ್ಯರನ್ನು ಒಳಗೊಂಡಂತೆ ಪುಟ್ಟ ಮಗು ಮನ್ವಿತಾ ರಿಂದ ದೀಪ ಬೆಳಗಿಸುವ ಮೂಲಕ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು . ಪೌರಕಾರ್ಮಿಕ ರಾದ ಮುತ್ತುರಾಜು ರವರಿಂದ ಟೈಪ್ ಕತ್ತರಿಸುವ ಮೂಲಕ ನೂತನ ನಗರಸಭೆಗೆ ಪಾದಾರ್ಪಣೆ ಮಾಡಲಾಯಿತು.ನಗರಸಭಾ ಅದ್ಯಕ್ಷರು ಹಾಗೂ ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕೆಲ ಬಿಜೆಪಿ ಜೆಡಿಎಸ್ ಪಕ್ಷದ ಸದ್ಯಸರನ್ನು ಹೊರತು ಪಡಿಸಿ ಉಳಿದ ನಗರಸಭೆಯ ಸದ್ಯಸ್ಯರ ಸಮಕ್ಷಮದಲ್ಲಿ ಕಾರ್ಯಕ್ರಮ ಮುಂದುವರೆಯಿತು 

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್ ರವಿ ಮಾತನಾಡಿ ದೊಡ್ಡಬಳ್ಳಾಪುರ ಜನತೆಯ ಒಳ್ಳೆಯತನವನ್ನು ಸಚಿವರು ದುರುಪಯೋಗಪಡಿಸಿಕೊಂಡಿದ್ದಾರೆ ಅಸಡ್ಡೆ ಭಾವನೆಯಿಂದ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಬೆಳಗಿನಿಂದ ಕಾದು ಕುಳಿತಿರುವ ಸರ್ವಜನಿಕರು ರೋಷಗೊಂಡು ಈ ನಿರ್ಣಯಕ್ಕೆ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಸಚಿವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಮಾನ್ಯ ಪೌರಾಡಳಿತ ಸಚಿವರಾದ ಎಂಪಿಬಿ ನಾಗರಾಜರವರಿಗೆ ಪೌರಕಾರ್ಮಿಕರ ಕುರಿತು ಯಾವುದೇ ಗೌರವ ನೀಡದಿರುವುದು ನೋವಿನ ಸಂಗತಿ ಎಂದು ತಿಳಿಸಿದರು

ದೊಡ್ಡಬಳ್ಳಾಪುರ ತಾಲೂಕಿನ ಶಾಸಕರಾದ ಟಿ ವೆಂಕಟರಮಣಯ್ಯ ಮಾತನಾಡಿ ನೂತನ ನಗರಸಭಾ ಕಟ್ಟಡವನ್ನು ಪುಟ್ಟಮಗು ಮನ್ವಿತಾ ರವರ ಹಸ್ತಗಳಿಂದ ದೀಪ ಹಚ್ಚುವ ಮೂಲಕ ಉದ್ಘಾಟಿಸಿದ್ದು ಪೌರಕಾರ್ಮಿಕ ಮುತ್ತುರಾಜ್ ರವರಿಂದ ಟೇಪ್ ಕತ್ತರಿಸುವ ಮೂಲಕ ಪದಾರ್ಪಣೆ ಮಾಡಲಾಗಿದೆ ಮಕ್ಕಳು ದೇವರಿದ್ದಂತೆ ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಕೂಡ ದೇವರಿದ್ದಂತೆ ಈ ಕಟ್ಟಡಕ್ಕೆ ಯಾವುದೇ ರೀತಿಯ ಕೆಡುಕು ಉಂಟಾಗುವುದಿಲ್ಲ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ನೀಡುವಲ್ಲಿ ಯಾವುದೇ ಸಂಶಯವಿಲ್ಲಎಂದುಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಹಲವು ನಗರಸಭೆಯ ಸದಸ್ಯರು, ಸ್ಥಳೀಯ ಮುಖಂಡರು , ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*