ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಈ ಭೂಮಿಮೇಲೆ ಜನಿಸಿದ ಪ್ರತಿಯೊಂದು ಮಗು ವಿಶ್ವಮಾನವನಾಗಲು ಸಾದ್ಯ ವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀಮತಿ ಶಿಲ್ಪಾ ಹಿರೆಮಠ ಹೇಳಿದರು.
ತಾಲ್ಲುಕಿನ ಯಡಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಗೋಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಹುಟ್ತಿದ ಮಕ್ಕಳು ದೇವರ ಸಮಸಮಾನ ಎಂಬ ಮಾತುಗಳು ಪ್ರಚಲಿತವಾಗಿದ್ದು ಬೆಳೆಯುತ್ತ ವಾತಾವರಣ ಸಮಾಜ, ಜಾತಿ, ಧರ್ಮ ಮೇಲು ಕೀಳು ಬಡವ ಬಲ್ಲಿದವ ರೆಂಬ ಸಂಗತಿಗಳು ಆ ಮಗುವನ್ನು ಅಲ್ಪನನ್ನಾಗಿ ಮಾಡುತ್ತಿವೆ ಎಂದರು.
ಮಕ್ಕಳು ಯಾರೂ ದಡ್ದರಲ್ಲ. ಯಾರೂ ಜಾಣರಲ್ಲ. ಅವರವರ ಬುದ್ದಿಮಟ್ತ ತಕ್ಜಂತೆ ಗುಣಗಳನ್ನು ಹೊಂದಿರುತ್ತಾರೆ ಎಂದರು.ನಿಜವಾದ ಶಿಕ್ಷಣ ವೆಂದರೆ ಮಾನವೀಯತೆಯ ವಿಕಾಸವಾಗಿದ್ದು ಎಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆಯೊ ಅಲ್ಲಿ ಮನುಷ್ಯತ್ವ ತಾನಾಗಿಯೆ ಬರುತ್ತದೆ ಎಂದರು.
ಪಾಲಕರು ಮಕ್ಜಳ ಪೋಷಣೆಮಾಡಿದರೆ ಶಿಕ್ಷಕ ಅವರಲ್ಲಿ ಅಡಗಿದ ಪ್ರತಿಭೆ ಅಣಾವರಣ ಗೊಳಿಸುತ್ತಾನೆ ಒಬ್ಬ ಶಿಕ್ಷಕ ಒಂದು ಮಗುವಿನ. ಭವಿಷ್ಯ ರೂಪಿಸುವವನಾಗಿದ್ದಾನೆ ಎಂದರು.
ಶಿಕ್ಷಣ ಪದ್ದತಿ ಹಿಂದಿಗಿಂತಲು ವಿಭಿನ್ನವಾಗಿದ್ದು ಇಂದು ಕೇವಲ ಚುಕ್ಕೆ ಗುರುತಿಸುವ ಮೂಲಕ. ಪರಿಕ್ಷೆಗಳು ಬಂದಿದ್ದು ಮಕ್ಜಳು ಹೆದರದೆ ನಕಲು ಮಾಡದೆ ಧೈರ್ಯವಾಗಿ ಪರಿಕ್ಷೆಬರೆದು ಹೆಚ್ಚಿನ ಅಂಕ ಪಡೆದು ಶಾಲೆಗೆ ಸ್ಜಿಕ್ಷಕರಿಗೆ ಪಾಲಕರಿಗೆ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಗ್ರಾಮದ ಮಾಹಾದೇವಪ್ಪ. ನೀಲಣ್ನವರ್ ಅಶೋಕ. ಮೇಟಿ ಮಾತನಾಡಿ ಶಾಲೆ ಬೆಳೆದು ಬಂದ ದಾರಿ ವಿವರಿಸಿದರು . ಇದೇ ಸಂದರ್ಭದಲ್ಲಿ ಕ್ರೀಡೆ ಸಾಂಸ್ಕೃತಿಕ ಕಾರ್ಯದಲ್ಲಿ ವಿಜೆತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಮನರಂಜನ ಕಾರ್ಯಕ್ರಮ ಜರುಗಿದವು.
ಪ್ರಾರಂಭದಲ್ಲಿ ಶಿಕ್ಷಕ ಎಲ್.ಎಸ್.ಅಕ್ಕೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಢ ಸದಶ್ಯರು ಎಸ್.ಡಿ.ಎಮ್.ಸಿ.ಯ ಹಾಲಿ ಮತ್ತು ಮಾಜಿ ಅಧ್ಯಕ್ಷರು ಸದಶ್ಯರು, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಡಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು ಮುಖ್ಯಗುರು ಅರ್.ಟಿ.ಬಾಳಕ್ಕನವರ. ಸ್ವಾಗತಿಸಿದರು ಶಿಕ್ಷಕಿ ಶ್ರೀಮತಿ ಸುಜಾತಾ ಬನಹಟ್ತಿ ನಿರೂಪಿಸಿದರು ಶಿಕ್ಷಕ. ಟಿ.ಕೆ.ಪಾಟಿಲ್ ವಂದಿಸಿದರು.
Be the first to comment