ಡಾಕ್ಟರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ರಸ್ತೆ ಹಾಗೂ ಪುತ್ಥಳಿ ಸ್ಥಾಪಿಸಲು ಅನುಮತಿ ನೀಡಿ – ಕರುನಾಡ ವಿಜಯ ಸೇನೆ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಕರುನಾಡ ವಿಜಯ ಸೇನೆ ಸೋಂಪುರ ಹೋಬಳಿ ವತಿಯಿಂದ ದಾಬಸ್ ಪೇಟೆಯ ಮಧುಗಿರಿ ರಸ್ತೆಗೆ ಪುನೀತ್ ರಾಜಕುಮಾರ್ ಅವರ ಹೆಸರಿಡುವಂತೆ ಹಾಗೂ ಪುತ್ಥಳಿ ಇಡಲು ಅನುಮತಿ ಕೋರಿ ಇಂದು ಸೊಂಪುರ ಪಂಚಾಯತಿ ಅದ್ಯಕ್ಷರು ಹಾಗೂ ಪಂಚಾಯಿತಿ ಅಭಿರುದ್ದಿಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

CHETAN KENDULI

ದಾಬಸ್ ಪೇಟೆಯ ಮಧುಗಿರಿ ವೃತ್ತಕ್ಕೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಮತ್ತು ಪುತ್ತಳಿ ನಿರ್ಮಾಣ ಮಾಡಬೇಕೆಂದು ಅನುಮತಿ ಕೋರಿ ಸೋಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಶಂಕರ್ ಹಾಗೂ ಪಂಚಾಯಿತಿ ಅಧ್ಯಕ್ಷರಿಗೆ ಕರುನಾಡ ವಿಜಯ ಸೇನೆ ಸೋಂಪುರ ಹೋಬಳಿಯ ಎಲ್ಲ ಪದಾಧಿಕಾರಿಗಳ ಪರವಾಗಿ ಮನವಿ ಸಲ್ಲಿಸಲಾಯಿತು ,

 

ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸುಚೇಂದ್ರ ಎಸ್ ನೆಲಮಂಗಲ ತಾಲೂಕು ಅಧ್ಯಕ್ಷರಾದ ವಸಂತಕುಮಾರ ಕೆ ಸೋಂಪುರ ಹೋಬಳಿ ಅಧ್ಯಕ್ಷರಾದ ಭರತ ಎಸ್ ಆರ್ ಸೋಂಪುರ ಹೋಬಳಿ ಕಾರ್ಯಾಧ್ಯಕ್ಷರಾದ ಮನು ಪ್ರಸಾದ್ ಹೋಬಳಿ ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಜೇಶ್ ಯುವ ಘಟಕದ ಅಧ್ಯಕ್ಷರಾದ ಭರತ ಯುವ ಘಟಕದ ಪುನೀತ್ ಲಕ್ಷ್ಮೀಕಾಂತ ಬಂಡಾಯಸ್ವಾಮಿ ಸುಮನ್ ಶಿವಗಂಗೆ ದಿನೇಶ್ ಗ್ರಾಮ ಶಾಖೆಯ ಅಧ್ಯಕ್ಷರಾದ ಸಂಜಯ್ ಗೋವಿಂದರಾಜು ಆಟೋ ಘಟಕದ ಪುಟ್ಟರಾಜು ಸಾಹಿಲ್ ಪಾಷಾ ಹಾಗೂ ಸೋಂಪುರ ಹೋಬಳಿ ವಿಜಯಸೇನೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*