ಜೈ ಭೀಮ್ ಕ್ರಿಕೆಟ್ ಕ್ಲಬ್ ನೇತೃತ್ವದಲ್ಲಿ ಹಿರಿಯ ಮುಖಂಡರಿಂದ ಗೆಲುವಿನ ತಂಡಗಳಿಗೆ ಬಹುಮಾನ ವಿತರಣೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಜೈ ಭೀಮ್ ಕ್ರಿಕೆಟ್ ಕ್ಲಬ್ ಮೆದಿಕಿನಾಳ ಇವರ ವತಿ
ಯಿಂದ ಕ್ರಿಕೆಟ್ ಓಪನ್ ಟೂರ್ನಮೆಂಟ್ ಪಂದ್ಯವನ್ನು ಹಮ್ಮಿ ಕೊಳ್ಳಲಾಗಿತ್ತು.ಕಾರ್ಯಕ್ರಮದ ಗಣ್ಯರನ್ನು ಶಾಲು ಮತ್ತು ಹೂವಿನ ಮಾಲೆ ಹಾಕುವ ಮೂಲಕ ವೇದಿಕೆಗೆ ಬರ ಮಾಡಿಕೊಳ್ಳಲಾಯಿತು.ಕಾರ್ಯ್ರಮದ ಕುರಿತು ಮಾತನಾಡಿದ ಯಲ್ಲಪ್ಪ ಕೋಸಿಗಿ ಎಸ್. ಡಿ. ಏಮ್. ಸಿ ಅಧ್ಯಕ್ಷರು ಸ. ಪ್ರೌ. ಶಾಲೆ ಮೆದಿಕಿನಾಳ ಇವರು ನಮ್ಮ ಊರಲ್ಲಿ ಟೂರ್ನಮೆಂಟ್ ಕ್ರಿಕೆಟ್ ಪಂದ್ಯಾವಳಿ ಗಳನ್ನು ಯಶಸ್ವಿಯಾಗಿ ನಡೆಸಿದ್ದು ಸಂತೋಷದ ವಿಷಯ ಹಾಗೆಯೇ ಯಾವುದೇ ಉರಾಲಿ ನಾಲ್ಕು ಮನೆಗಳಿದ್ದರು ಅಲ್ಲಿ ಗಲಾಟೆ ಗದ್ದಲಗಳಾಗುವವು ಆದರೆ ನಮ್ಮ ಊರಲ್ಲಿ ಶಾಂತಿಯುತವಾಗಿ ನಡೆಸಿದ ಜೈಭೀಮ್ ಕ್ಲಬ್ ನ ಸರ್ವ ಸದಸ್ಯರಿಗೆ ವಂದಿಸುತ್ತೇನೆ. ಹಿಗೆಯೇ ಮುಂದಿನ ದಿನಮಾನಗಳಲ್ಲಿಯೂ ಹತ್ತು ಹಲವು ಪಂದ್ಯಾವಳಿ ಗಳನ್ನೂ ನಡೆಸಿ ಮೆದಿಕಿನಾಳ ಗ್ರಾಮದ ಹಿರಿಮೆಯನ್ನು ಹೆಚ್ಚಿಸಲಿ ಎಂದು ಅರೈಸಿದರು.

CHETAN KENDULI

ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮಸ್ಕಿ ತಂಡದ ಫೈನಲ್ ಪಂದ್ಯಾವಳಿ ಮುಗಿದ ನಂತರ ನಾಯಕ ಮಹಮ್ಮದ್ ಗೌಸ್ ಪಾಷ ತಂಡವು ಜೈ ಭೀಮ್ ಕ್ರಿಕೆಟ್ ಕ್ಲಬ್ ವತಿಯಿಂದ ದಿನಾಂಕ: 03-02-2022 ಗುರುವಾರ ಸಾಯಂಕಾಲ ನಡೆಸಲಾದ ಫೈನಲ್ ಓಪನ್ ಟೂರ್ನಮೆಂಟ್ ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮೊದಲಿಗೆ ಎಫ್. ಸಿ. ಸಿ (ಎಮ್. ಪಿ. ಎಮ್ ) ಮಸ್ಕಿ ತಂಡವು ಪ್ರಥಮ ಸ್ಥಾನದಲ್ಲಿ ಗೆಲುವನ್ನು ಸಾಧಿಸಿದೆ ಪ್ರಥಮ ಬಹುಮಾನವಾಗಿ 25,000 ರೂಪಾಯಿ ಹಾಗೂ ಪ್ರಶಸ್ತಿಯನ್ನು ತಂಡದ ಸದಸ್ಯರಿಗೆ ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಮೆದಿಕಿನಾಳ ಜೈ ಭೀಮ್ ತಂಡ ಪಡೆದಿದೆ ದ್ವಿತೀಯ ಬಹುಮಾನ 15,000 ರೂಪಾಯಿ ಹಾಗೂ ಪ್ರಶಸ್ತಿಯನ್ನು ತಂಡದ ಸದಸ್ಯರಿಗೆ ಪ್ರದಾನ ಮಾಡಲಾಯಿತು.ತೃತೀಯ ಸ್ಥಾನ ವನ್ನು ಅರ್. ಸಿ. ಬಿ ಅಂತರಗಂಗಿ ತಂಡವು ಪಡೆದಿದೆ ತೃತೀಯ ಬಹುಮಾನವಾಗಿ 10,000 ರೂಪಾಯಿ ಹಾಗೂ ಪ್ರಶಸ್ತಿ ಫಲಕ ವನ್ನು ತಂಡದ ಸದಸ್ಯರಿಗೆ ನೀಡಲಾಯಿತು.
ಉತ್ತಮ ಬಾಲರ್ : ಅಂಬ್ರೇಶ್ ಗುರುಗುಂಟಾ ಇವರಿಗೆ 1501 ರುಪಾಯಿ ಕೇಶವ ಪವಾರ್ ಗ್ರಾಮ ಪಂಚಾಯಿತಿ ಮೆದಿಕಿನಾಳ ಸದಸ್ಯರು ವಿತರಿಸಿದರು , ಹೈಯೆಸ್ಟ್ ಸಿಕ್ಸರ್: ರಮೇಶ ಅಂತರಗಂಗಿ ಇವರಿಗೆ 1501 ರೂಪಾಯಿ ಹಾಗೂ ಪ್ರಶಸ್ತಿ ಯನ್ನು ಮರಿಯಪ್ಪ ಭೋವಿ ವಡ್ಡರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮೆದಿಕಿನಾಳ ವಿತರಿಸಿದರು.ಜೈ ಭೀಮ್ ಕ್ರಿಕೆಟ್ ಕ್ಲಬ್ ಮೆದಿಕಿನಾಳ ಪಂದ್ಯಗಳಿಗೆ ಬಹುಮಾನ ಕೊಡುಗೆಪ್ರಥಮ ಬಹುಮಾನ : ಶ್ರೀ ಆರ್. ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ ವಿಧಾನ ಸಭಾ ಕ್ಷೇತ್ರ,ದ್ವಿತೀಯ ಬಹುಮಾನ : ಯಲ್ಲಪ್ಪ ಕೋಸಿಗಿ ಎಸ್. ಡಿ. ಏಮ್. ಸಿ ಅಧ್ಯಕ್ಷರು ಸ. ಪ್ರೌ. ಶಾಲೆ . ಮೆದಿಕಿನಾಳ,ತೃತೀಯ ಬಹುಮಾನ : ರಡ್ಡೆಪ್ಪ ಗೌಡ ಗ್ರಾಮ ಪಂಚಾಯಿತಿ ಸದಸ್ಯರು ನಾಗರಬೆಂಚಿ,ಕಾರ್ಯಕ್ರಮವನ್ನು ಜಯಪ್ಪ ಮಾಸ್ಟರ್ ಮೆದಿಕಿನಾಳ ನಿರೂಪಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿಗ್ರಾಮದ ಹಿರಿಯ ಮುಖಂಡರು, ಜೈ ಭೀಮ್ ಕ್ರಿಕೆಟ್ ಕ್ಲಬ್ ನ ಪ್ರಮುಖ ಮೇಲುಸ್ತುವಾರಿಗಳು ಹಾಗೂ ಕ್ರೀಡಾ ಪಟುಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*