ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿ ಬರ್ತ್ ಡೇ ಒಂದು ಆಡಂಬರವಾಗದೇ ಸಮಾಜದಲ್ಲಿ ಹಲವಾರು ಬಡ ಜನರಿಗೆ ಆಸರೆಯಾಗಬೇಕು ಎ೦ದು ಕೊಯಿರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಮ್ಯವಿ ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಜಯಪುರ ಬಳಿಯ ಪತಿ ಶ್ರೀನಿವಾಸ್ (ಎಚ್ ವಿ ಎಸ್) ಅವರ 35 ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ವೋದಯ ಆಶ್ರಮದಲ್ಲಿನ ಎಲ್ಲಾ ವೃದ್ಧರಿಗೆ ‘ಮಕ್ಕಳಿಗೆ ಹಬ್ಬದ ಅಡುಗೆ ಹಾಗೂ ತಿನಿಸುಗಳನ್ನು ವಿತರಿಸಿ ಅವರು ಮಾತನಾಡಿದರು. ಬಹಳಷ್ಟು ಮಂದಿ ವಿಶೇಷವಾಗಿ ಯಾವ ಯಾವ ರೀತಿಯಲ್ಲಿ ಬರ್ತ್ ಡೇಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ನನ್ನ ಪತಿಯ ಹುಟ್ಟುಹಬ್ಬವನ್ನು ಅನಾಥ ಮಕ್ಕಳೊಂದಿಗೆ, ಆಶ್ರಮದ ಸದಸ್ಯರೊಂದಿಗೆ ಆಚರಿಸಿಕೊಳ್ಳತ್ತಿರುವುದು ಮನಸ್ಸಿಗೆ ಸಂತೋಷ ತಂದೊಡ್ಡಿದೆ ಎ೦ದು ಸಂತಸ ವ್ಯಕ್ತಪಡಿಸಿದರು.ಈ ವೇಳೆಯಲ್ಲಿ ಮುಖಂಡ ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಕುಟುಂಬಸ್ಥರು, ಸಹೋದರ ಶಿವ ಕುಮಾರ್ ‘ ಮುಖಂಡ ಗೌಡಪ್ಪ, ಸರ್ವೋದಯ ಆಶ್ರಮದ ಸಿಬ್ಬಂದಿ ಇದ್ದರು.
Be the first to comment