ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಕೊರೊನಾ ನಿರ್ಲಕ್ಷ್ಯ ಬೇಡ ಸ್ವಲ್ಪ ತಡಮಾಡಿದರು ಪ್ರಾಣಕ್ಕೆ ಅಪಾಯವಾಗುವ ಸಾದ್ಯತೆ ಇದೆ.ಕೊರೊನಾ ಅಟ್ಯಾಕ್ ಆಗಿ 14 ನೇ ದಿನಕ್ಕೆ ಉಸಿರು ನಿಲ್ಲುವ ಸಾಧ್ಯತೆ ಇರುವುದರಿಂದ ಲಕ್ಷಣ ಕಂಡು ಬಂದ ಕೂಡಲೆ ಆಸ್ಪತ್ರೆಗೆ ಹೋಗುವುದು ಒಳ್ಳೆಯದು.
ಕೆಲವರು ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಾಗ ತಾವೆ ಮಾತ್ರೆ ನುಂಗಿ ಮನೆಯಲ್ಲಿಯೇ ಉಳಿಯುತ್ತಾರೆ.ತಡವಾಗಿ ಆಸ್ಪತ್ರೆಗೆ ಸೇರಿ ವೆಂಟಿಲೆಟರ್ಗೆ ಹೋದಲ್ಲಿ ಬದುಕುವುದು ಕಷ್ಟ.ಆಸ್ಪತ್ರೆಗೆ ದಾಖಲಾದ 14 ದಿನದೊಳಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿ 68 ಜನ ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 390 ಕೊರೊನಾ ಪ್ರಕರಣಗಳು ದೃಡಪಟ್ಟಿವೆ.ಸೊಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿದೆ. ಇದಕ್ಕೆ ನಿರ್ಲಕ್ಷ್ಯ ತೋರದೆ ಸ್ವಯಂಪ್ರೇರಿತವಾಗಿ ಎಲ್ಲರು ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಮಾಸ್ಕ ಧರಿಸುವುದನ್ನು ರೂಢಿಸಿಕೊಂಡರೆ ಉತ್ತಮ.
Be the first to comment