ಜಿಲ್ಲಾ ಸುದ್ದಿಗಳು
ಕುಮಟಾ
ಕರಾವಳಿಯ ಜಿಲ್ಲೆಯ ನಡುವಿನ ತಾಲೂಕಾದ ಕುಮಟಾ ಬಸ್ ನಿಲ್ದಾಣದ ಒಳಗೆ ಇರುವ ಹೊಟೆಲ್ ನಲ್ಲಿ ಉಪಹಾರ ಮತ್ತು ಊಟಕ್ಜೆ ಬಾಯಿಗೆ ಬಂದಂತೆ ಹಣ ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು..ಗ್ರಾಹಕರು ತಿಂಡಿ ತಿಂದ ನಂತರ ಸಂಕಷ್ಟಕ್ಕೆ ಸಿಲುಕುವಂತ ಪರಿಸ್ಥಿತಿ ಇದೆ.ಕೊವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಈ ರೀತಿ ಈ ಹೊಟೆಲ್ ಮಾಲಿಕನ ವರ್ತನೆ ತುಂಬಾ ಬೇಸರ ತರಿಸುವಂತಿದೆ. ಬದಲಾಗಿದೆ ಯಾವುದೇ ದರ ನಿಗದಿಪಡಿಸಿರುವ ನಾಮಫಲಕ ಸಹ ಇಲ್ಲಿ ಅಳವಡಿಸಿರುವುದಿಲ್ಲ. ಬೇಕಾಬಿಟ್ಟಿ ಬಾಯಿಗೆ ಬಂದಂತೆ ಹಣ ವಸುಲಿ ಮಾಡಲಾಗುತ್ತಿದೆ.ಈ ಹೊಟೆಲ್ ನಲ್ಲಿ ಇನ್ನು ಮುಂದಾದರು ಊಟ ತಿಂಡಿಯ ಬೆಲೆ ಇರುವ ಬೋರ್ಡ್ ಕಡ್ಡಾಯವಾಗಿ ಅಳವಡಿಸುವಂತೆ ಮಾಡಬೇಕಿದೆ.ಈ ಬಗ್ಗೆ ಸಂಬಂಧಪಟ್ಟ ಪುಡ್ ಅಧಿಕಾರಿಗಳು ಮತ್ತು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಗಮನಹರಿಸಬೇಕೆಂಬುದು ಗ್ರಾಹಕರ ಬೇಡಿಕೆಯಾಗಿದೆ.
Be the first to comment