ಜಿಲ್ಲಾ ಸುದ್ದಿಗಳು
ಅಂಕೋಲ
ಗ್ರಾಮ ಸಹಾಯಕರ ನ್ಯಾಯಯುತ ಬೇಡಿಕೆಯ ಈಡೇರಿಕೆಗಾಗಿ ರಾಜ್ಯದ ಗ್ರಾಮ ಸಹಾಯಕರಿಂದ ಸಪ್ಟೆಂಬರ್ 22 ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಸಿದ್ಧಾಪುರ ರವರು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದಾರೆ .
ಈ ರಾಜ್ಯದಲ್ಲಿ 10,450 ಗ್ರಾಮ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದು , ಉತ್ತರ ಕನ್ನಡ ಜಿಲ್ಲೆಯಲ್ಲಿ 385 ಗ್ರಾಮ ಸಹಾಯಕರಿದ್ದಾರೆ. ಕೇವಲ 12 ವರೆ ಸಾವಿರ ಸಂಬಳಕ್ಕೆ ದುಡಿಯುತ್ತಿದ್ದು ಇವರಿಗೆ ಸರ್ಕಾರದ ಯಾವುದೇ ಸೌಲಭ್ಯವೂ ದೊರಕುತ್ತಿಲ್ಲ. ಅಲ್ಲದೆ ಪಿಂಚಣಿ ಸಹ ಇಲ್ಲ. ಯಾವುದೆ ಪರಿಹಾರ ಕೂಡ ಇವರಿಗೆ ದೊರಕುವುದಿಲ್ಲ. ಸೇವೆಗೆ ಪ್ರತಿಯಾಗಿ ಇಲ್ಲಗಳೆ ಜಾಸ್ತಿಯಾಗಿದೆ. ಇಷ್ಟು ಕಡಿಮೆ ಸಂಬಳದಲ್ಲಿ ಪ್ರತಿಯೊಂದು ಕೆಲಸದಲ್ಲಿ ದುಡಿಯುವ ಖಾಯಂಆತಿ ಇಲ್ಲವಾಗಿದೆ.
ಕಳೆದ 40 ವರ್ಷಗಳಿಂದ ಜೀತದಂತೆ ದುಡಿಯುವ ಇವರ ಬೇಡಿಕೆಯ ಕೂಗು ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ. ಹಿಂದಿನ ಜೀತ ಪದ್ದತಿ ಗ್ರಾಮ ಸಹಾಯಕರ ಮಟ್ಟಿಗೆ ಇಂದಿಗೂ ಜೀವಂತವಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮಕೃಷ್ಣ ಎಚ್ ನಾಯ್ಕ, ದೇವೇಂದ್ರ ನಾಯ್ಕ, ಖಜಾಂಚಿ ಮಾಸ್ತಿ ನಾಯ್ಕ, ಕಾರ್ಯದರ್ಶಿ ಕಲಾಲ್, ಸಂಘಟನಾ ಕಾರ್ಯದರ್ಶಿ ರೇಷ್ಮಾ ಪರ್ನಾಂಡಿಸ್, ಕಾರವಾರ ತಾಲೂಕು ಅಧ್ಯಕ್ಷ ನಾಗೇಶ್ ನಾಯ್ಕ ಸೇರಿದಂತೆ ಹಲವರು ಉಪಸ್ತಿತರಿದ್ದರು.
ಹಾಗೆಯೇ ಮುಂದಿನ ರೂಪರೇಷೆಯ ಬಗ್ಗೆ ಚರ್ಚಿಸಿ ಎಲ್ಲಾ ತಾಲೂಕಿನ ಸಂಘಟನೆಯ ಪದಾಧಿಕಾರಿಗಳು ವಿಧಾನಸೌಧ ಮುತ್ತಿಗೆ ಬೆಂಗಳೂರು ಚಲೋ ಸಹಮತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲಿ ರವಿ ನಾಯ್ಕ ಸ್ವಾಗತಿಸಿದರು , ಅಂಕೋಲ ತಾಲೂಕಾ ಅಧ್ಯಕ್ಷ ರಾಮಕೃಷ್ಣ ನಾಯ್ಕ ಪ್ರಸಾವಿಕ ಮಾತನಾಡಿದ್ದಾರೆ.
Be the first to comment