ಜಿಲ್ಲಾ ಸುದ್ದಿಗಳು
ಭಟ್ಕಳ:
ಇಲ್ಲಿನ ಸರ್ಕಾರಿ ಆಸ್ಪತ್ರೆ ತುರ್ತು ಚಿಕಿತ್ಸೆ ಕೊಠಡಿಯ ಎದುರುಗಡೆ ಆವರಣದಲ್ಲಿ ಸದಾ ಬೀದಿ ನಾಯಿಗಳು ಬಂದು ಮಲಗಿ ಗಾಡ ನಿದ್ರೆಯಲ್ಲಿ ಜಾರಿರುತ್ತವೆ, ಆದರೂ ಕೂಡ ಅಲ್ಲಿನ ಭದ್ರತಾ ಸಿಬ್ಬಂದಿಯಾಳಾಗಲಿ , ಸಿಬ್ಬಂದಿಗಳಾಗಲಿ , ಆರೋಗ್ಯ ಅಧಿಕಾರಿಗಳು ಆಗಲಿ ಯಾರು ಕೂಡ ಈ ಬೀದಿ ನಾಯಿಗಳ ಕಡೆ ಗಮನ ಹರಿಸುತ್ತಿಲ್ಲ.
ಭಟ್ಕಳ ಸರಕಾರಿ ಆಸ್ಪತ್ರೆ ಆರೋಗ್ಯ ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯ ಮನೋಭಾವನೆಯಿಂದ ಈ ಬೀದಿ ನಾಯಿಗಳು ಸದಾ ಅಲ್ಲಿ ಬಂದು ಮಲಗಿ ವಾಸ ಮಾಡಲು ಕಾರಣ, ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಈ ಬೀದಿ ನಾಯಿಗಳು ಕಚ್ಚಿದರೆ ಇದ್ದಕ್ಕೆ ಹೊಣೆ ಯಾರು, ಸಣ್ಣ ಪುಟ್ಟ ವಿಚಾರಗಳನ್ನೇ ದೊಡ್ಡ ದೊಡ್ಡದಾಗಿ ಬಿಂಬಿಸಿ ದೊಡ್ಡಮಟ್ಟದ ಪ್ರಚಾರ ಪಡೆಯುವ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಂಭಂದಿಸಿದ ಅಧಿಕಾರಿಗಳು, ಇಲ್ಲಿನ ಸರಕಾರಿ ತುರ್ತು ಚಿಕಿತ್ಸೆ ಕೊಠಡಿ ಆವರಣ ಎದುರುಗಡೆ ಸ್ಥಳವನ್ನ ಬೀದಿ ನಾಯಿಗಳ ವಾಸಸ್ಥಾನ ಮಾಡಲು ಬೆಟ್ಟಿದು ಯಾಕೆ? ಇವರ ನಿರ್ಲಕ್ಷವೇ ಇದ್ದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Be the first to comment