ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಎಲ್ ಎನ್ ನಾರಾಯಣಸ್ವಾಮಿ.

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ 

ದೇವನಹಳ್ಳಿ ಅಲ್ಪ ಸಂಖ್ಯಾತರು ಇರುವ ಶಾಲೆಗಳ ಅಭಿವೃದ್ಧಿ ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಶಾಲೆಗಳ ಸಮಗ್ರ ಅಭಿವೃದ್ಧಿ ಯಾಗಲು ಇರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲು ಜಿಲ್ಲಾಧಿಕಾರಿ ಗಳು ಸಹಕಾರ ನೀಡಿದ್ದಾರೆ. ಆದ್ದರಿಂದ ಉತ್ತಮ ಗುಣಮಟ್ಟದ ಕಾಮಗಾರಿಯ ಮೂಲಕ ಶಾಲೆಗಳಿಗೆ ಹೊಸ ಆಯಾಮ ನೀಡುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

CHETAN KENDULI

ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುರಳಗುರ್ಕಿ ಗ್ರಾಮದಲ್ಲಿ ಭಾದಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಶಾಲಾ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಅಣಿಘಟ್ಟ ಗ್ರಾಮದ ಶಾಲೆಗೆ ಸುಮಾರು 14.6 ಲಕ್ಷ, ಹುರಳು ಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮತ್ತು ಶಂಕುಸ್ಥಾಪನೆಗೆ 14.6 ಲಕ್ಷರೂ, ಶಾಸಕರ ಅನುದಾನದಲ್ಲಿ ಹೈಮಾಸ್ಟ್ ಲೈಟ್ ಗೆ 5 ಲಕ್ಷರೂ, ಹಾಗೂ ಮದರಸ ಶಾಲೆಯಲ್ಲಿ ಗಣಕ ಯಂತ್ರಗಳಿಗೆ ಚಾಲನೆ ಹುರಳಗುರ್ಕಿ ಗ್ರಾಮ, ಅರುವನಹಳ್ಳಿ ಗ್ರಾಮ, ಬಚ್ಚಹಳ್ಳಿ ಗ್ರಾಮ,ಚಿಕ್ಕಣ್ಣ ಹೊಸಳ್ಳಿಯ ಶಾಲೆ ಅಭಿವೃದ್ಧಿಗೆ ತಲಾ 14.6 ಲಕ್ಷ ರೂ, ವಿಜಯಪುರದ ಮೌಲಾನಾ ಅಜಾದ್ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸುಮಾರು 60 ಲಕ್ಷರೂ ವೆಚ್ಚದ ಕಾಮಗಾರಿ, ಹೀಗೆ ಶಾಲೆಯ ಅಭಿವೃದ್ಧಿ ಕಾರ್ಯಗಳು ನಡೆಯಲು ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ವೆಂಕಟಗಿರಿಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಅಮರ್ ನಾಥ್, ಎ.ಪಿ.ಎಂ.ಸಿ ನಿರ್ದೇಶಕ ಮಂಜುನಾಥ್, ವಿಜಯಪುರ ಹೋಬಳಿ ಅಧ್ಯಕ್ಷ ವೀರಪ್ಪ, ಮುಖಂಡರಾದ ಹನುಮಂತಪ್ಪ, ಮಂಡಿಬೆಲೆ ರಾಜಣ್ಣ ಮತ್ತು ವೆಂಕಟಗಿರಿಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು ಮುಖಂಡರು ಹಾಜರಿದ್ದರು.

8861100990

Be the first to comment

Leave a Reply

Your email address will not be published.


*