ಜಿಲ್ಲಾ ಸುದ್ದಿಗಳು
ಕುಮಟಾ
ರಸ್ತೆ ಮತ್ತು ಇತರ ಸಕಾರಿ ಕಾಮಗಾರಿಗಳಿಗೆ ಸರ್ವಿಸ್ ಟ್ಯಾಕ್ಸ್ ಅನ್ವಯ ಆಗದೇ ಇದ್ದರೂ ಅನಾವಶ್ಯಕವಾಗಿ ನೋಟಿಸು ನೀಡುವ ಕ್ರಮದ ವಿರುದ್ಧ ಮತ್ತು ಇನ್ನೂ ಹಲವು ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಅ.27 ಬುಧವಾರ ಬೆಳಿಗ್ಗೆ 10 ಗಂಟೆಗೆ ಕಾರವಾರದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಸಿವಿಲ್ ಗುತ್ತಿಗೆದಾರರು ಸೇರಿ ಬೃಹತ್ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಿದೆ.
ಇಲ್ಲಿನ ಎ.ಪಿ.ಎಂ.ಸಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಗುತ್ತಿಗೆದಾರರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಂ ಹೆಗಡೆ ಯಲ್ಲಾಪುರ, ಸತೀಶ ಗೌಡ ಸಿದ್ದಾಪುರ, ಗಜಾನನ ಗುನಗ ಕುಮಟಾ, ಟಿ.ಡಿ ನಾಯ್ಕ ಭಟ್ಕಳ, ಪ್ರಧಾನ ಕಾರ್ಯದರ್ಶಿ ಜಿ.ಎಸ್ ಹಿರೇಮಠ ಶಿರಸಿ, ಕೋಶಾಧ್ಯಕ್ಷರಾದ ಎಂ.ಡಿ ಗೋವೇಕರ ಕಾರವಾರ, ಜಂಟಿ ಕಾರ್ಯದರ್ಶಿ ಎ.ಜಿ ನಾಯ್ಕ ಸಿದ್ದಾಪುರ, ತಾಂತ್ರಿಕ ಸಲಹೆಗಾರ ವೈ ಜೀನರಾಜ ಕುಮಟಾ, ಸಂಘಟನಾ ಕಾರ್ಯದರ್ಶಿ ಎಂ.ವಿ ಭಟ್ಟ ಭಟ್ಕಳ, ನಾಗೇಶ ನಾಯ್ಕ ಕುಮಟಾ, ಸಂಘದ ಕೋ ಆರ್ಡಿನೇಟರ್ ರಾಮದಾಸ್ (ಧೀರೂ) ಶನಭಾಗ ಕುಮಟಾ, ವಿಶೇಷ ಆಹ್ವಾನಿತರಾದ ರಮೇಶ ದುಬಾಷಿ ಶಿರಸಿ, ರಾಮಪ್ಪ ನಾಯ್ಕ ಹೊನ್ನಾವರ, ತಾಲೂಕು ಅಧ್ಯಕ್ಷರುಗಳಾದ ರಮೇಶ ನಾಯ್ಕ ಶಿರಸಿ, ಪ್ರಶಾಂತ ನಾಯ್ಕ ಕುಮಟಾ, ಮಾಧವ ನಾಯ್ಕ ಕಾರವಾರ, ಎಂ.ಪಿ. ನಾಯ್ಕ ಅಂಕೋಲಾ, ಹಾಗೂ ಜಿಲ್ಲೆಯ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರುಗಳು ಭಾಗವಹಿಸಿದ್ದರು.
Be the first to comment