ಮಹಾಮಂಡಳದಿಂದ ಮೈಸೂರು ಹುಲಿ ಹಜರತ್ ಟಿಪ್ಪು ಹುತಾತ್ಮ ದಿನಾಚರಣೆ.*

ಅಂಭಿಗ್ ನ್ಯೂಸ್

ರಾಜ್ಯ ಸುದ್ದಿ

ಮೈಸೂರ್ 


CHETAN KENDULI

ನವಲಗುಂದ : ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೆ ರಣರಂಗದಲ್ಲಿ ಹುತಾತ್ಮರಾದ ಮೈಸೂರು ಹುಲಿಯ ಹುತಾತ್ಮ ದಿನಾಚರಣೆಯನ್ನು ನವಲಗುಂದ ತಾಲೂಕು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಆಚರಿಸಲಾಯಿತು.

 

ಈ ವೇಳೆ ಮಾತನಾಡಿದ ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನರ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆ, ಕನ್ನಡ ಭಾಷಾ ಪ್ರೇಮ,ರೈತರ ಕಾಳಜಿ ಹಾಗೂ ವಿರೋಧಿಗಳಿಂದ ಧ್ವಂಸವಾಗಿದ್ದ ಶೃಂಗೇರಿ ಪೀಠವನ್ನು ಮರುಸ್ಥಾಪಿಸಿದರು, ಅವರ ಅವಧಿಯಲ್ಲಿ ಹಲವು ದೇವಸ್ಥಾನ- ಮಠಗಳಿಗೆ ದೇಣಿಗೆ ನೀಡಿದ್ದಾರೆ. ಟಿಪ್ಪು ಸುಲ್ತಾನರ ಧೈರ್ಯ ಸಾಹಸ ಪರಾಕ್ರಮ ನಮ್ಮೆಲ್ಲರಿಗೂ ಆದರ್ಶವಾಗಿದೆ.

 

ಅತ್ಯಾಧುನಿಕ ರಾಕೆಟ್, ಫಿರಂಗಿಗಳನ್ನು ಪರಿಚಯಿಸಿ ಯುದ್ಧ ಕೌಶಲ್ಯಗಳನ್ನು ತನ್ನ ಸೈನ್ಯಕ್ಕೆ ನೀಡುತ್ತಿದ್ದ ಅವರು ಅತ್ಯಾಧುನಿಕ ರಾಕೆಟ್, ಫಿರಂಗಿಗಳನ್ನು ಮೊಟ್ಟಮೊದಲು ಬಳಕೆಗೆ ತಂದವರು ಹಜರತ್ ಟಿಪ್ಪು ಸುಲ್ತಾನರು.

 

ತಮ್ಮ ಜೀವಿತದ 48 ವರ್ಷಗಳಲ್ಲಿ ಬ್ರಿಟೀಷರ ವಿರುದ್ಧ ದೇಶ ಸಂರಕ್ಷಣೆಗಾಗಿ 9 ವರ್ಷ ಯುಧ್ಧ ಮಾಡಿದರೆ, ಇನ್ನುಳಿದ 24 ವರ್ಷಗಳ ಕಾಲ ಅವರು ಮಾಡಿದ್ದು ಜನಪರ ಕಾರ್ಯಗಳು ಈ ಕಾರ್ಯಕ್ಕಾಗಿಯೆ ಇಂದಿಗೂ ಟಿಪ್ಪುವಿನ ಬಗ್ಗೆ ಜಾನಪದರು ಲಾವಣಿಗಳನ್ನು ಹಾಡಿ ಗೌರವ ಸೂಚಿಸುತ್ತಾರೆ,ತಮ್ಮ ಪ್ರೀತಿ ವ್ಯಕ್ತ ಪಡಿಸುತ್ತಾರೆ.

 

ದೇಶ ರಕ್ಷಣೆಗಾಗಿಯೇ ಅವರು ಮೈಸೂರು ಬಳಿಯ ಶ್ರೀರಂಗಪಟ್ಟಣದಲ್ಲಿ 1799 ಮೇ 4 ರಂದು ತಮ್ಮ 48ನೇ ವಯಸ್ಸಿನಲ್ಲಿ ಹುತಾತ್ಮರಾದರ ಟಿಪ್ಪು‌ ಸುಲ್ತಾನ್ ಅವರ ಪುಣ್ಯಸ್ಮರಣೆಯಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತೇವೆ ಎಂದು ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ಹೇಳಿದರು.

 

ಮಹಾಮಂಡಳದ ತಾಲೂಕಾ ಅಧ್ಯಕ್ಷ ಶಿರಾಜ ಅಹಮ್ಮದ್ ಶಿರಗುಪ್ಪಿ ಮಾತನಾಡಿ ಟಿಪ್ಪು ಸುಲ್ತಾನರು ಭಾರತ ದೇಶದ ನೆಲ, ಜಲ, ಪ್ರಜೆಗಳ ಏಳಿಗೆಗಾಗಿ ಯುದ್ಧಭೂಮಿಯಲ್ಲಿ ಮಡಿದ ಏಕೈಕ ದೊರೆ.

 

ಸಾಮ್ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಭದ್ರ ಪಡಿಸಿ ಸಾರಾಯಿ, ವೆಭಿಚಾರ, ಜೂಜು, ನಿಷೇಧಿಸಿದ ದೊರೆಯಾಗಿದ್ದರು

ನಿರೋದ್ಯೋಗಿಗಳಿಗೆ ಉದ್ಯೋಗ ಬತ್ತೆ, ರೈತರಿಗೆ ಬಡ್ಡಿ ರಹಿತ ಸಾಲ ನೀಡಿ.ದಲಿತರಿಗೆ, ಹಿಂದುಳಿದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರತೆ ಒದಗಿಸುತ್ತ ಮಹಿಳೆಯರ ಪ್ರಾಣ, ಮಾನ ಕಾಪಾಡಿದ ದೊರೆಯಾಗಿದ್ದರು ಎಂದು ಶಿರಾಜ್ ಮಾತನಾಡಿದರು.

 

ಈ ಸಂದರ್ಭದಲ್ಲಿ ಮಹಾಮಂಡ ಳದ ರಾಜ್ಯ ಪದಾಧಿಕಾರಿಗಳಾದ ನಬಿಸಾಬ್ ನದಾಫ್, ಮಹಾಬೂಬಅಲಿ ಕೊಪ್ಪಳ ಜಾವಿದ್ ಗುತ್ತಲ ಅಲ್ಲಾಬಕ್ಷ ಆದೋನಿ ಇತರರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*