ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ಲಸಿಕೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಊಹಾಪುಹಕ ಸುದ್ದಿಗಳು ಹರಡುತಿದ್ದು ಅವುಗಳ ಬಗ್ಗೆ ಯಾರೂ ಕಿವಿಗೋಡದೆ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಹಡಲಗೇರಿ ಗ್ರಾಪಂ ಪಿಡಿಓ ಶೋಭಾ ಮುದಗಲ್ಲ ಹೇಳಿದರು.
ತಾಲೂಕಿನ ಹಡಲಗೇರಿ ಗ್ರಾಪಂ ಸಭಾ ಭವನದಲ್ಲಿ ಸರ್ವ ಸದಸ್ಯರಿಗೆ ಲಸಿಕೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಸಿಕೆ ಹಾಕಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಇದರಿಂದ ಮನುಷ್ಯನ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿ ಕೊರೊನಾ ತಗಲುವಿಕೆಯ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ ಎನ್ನುವುದನ್ನು ಎಲ್ಲರೂ ತಿಳಿಯಬೇಕಿದೆ ಎಂದು ಹೇಳಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಗ್ರಾಪಂ ಸದಸ್ಯರಿಗೆ ಮಾಸ್ಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹರಿಂದ್ರಾಳ, ಅಬ್ದುಲ್ ರಜಾಕ್ ಮೋಕಾಶಿ, ರಮೇಶ ಬಿರಾದಾರ, ವಾಳಪ್ಪ ಲಮಾಣಿ, ಹಣಮಂತ ವಾಲಿಕಾರ, ಆರೋಗ್ಯ ಸಿಬ್ಬಂದಿಗಳಾದ ಮೇಲ್ವಿಚಾರಕಿ ರಿಹಾನಬೇಗಮ್ ಕಲಬುರ್ಗಿ, ಕಿರಿಯ ಸಹಾಯಕ ಸಿ. ಜಿ. ಬಿದರಕುಂದಿ, ಎಫ್. ಡಿ. ಸಿ. ಎಚ್. ಡಿ. ಮಾದರ, ವೈ. ಬಿ. ಭಜಂತ್ರಿ ಇದ್ದರು.
Be the first to comment