ಉದ್ದೇಶಪೂರ್ವಕವಾಗಿ ರಾಜಕೀಯ ಕೈವಾಡ ಗ್ರಾಮದ ಬಡವರಿಗೆ ಹೆಚ್ಚಿನ ತೊಂದರೆ* _ಪತ್ರಿಕಾ ಪ್ರಕಟಣೆಯಲ್ಲಿ ಗ್ರಾಮಸ್ಥ ಗಂಗಾಧರ್ ಮನವಿ_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೆಲವರು ಉದ್ದೇಶಪೂರ್ವಕವಾಗಿ ರಾಜಕೀಯ ಕೈವಾಡದಿಂದ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರ ಪಡೆದುಕೊಂಡು ಸರಕಾರಿ ಗೋಮಾಳದ ಜಾಗದಲ್ಲಿ ಈ ಹಿಂಎ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಮನೆಗೆ ಹೋಗುವ ರಸ್ತೆಯ ಜಾಗದಲ್ಲಿ ದುರುದ್ದೇಶದಿಂದ ಪ್ರವೀಣ್ ಎಂಬುವವರು ಮನೆಕಟ್ಟಲು ಮುಂದಾಗುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೆಲ ಗ್ರಾಮದ ಮುಖಂಡರು ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ ಎಂದು ತೈಲಗೆರೆ ಗ್ರಾಮಸ್ಥ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CHETAN KENDULI

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ತೈಲಗೆರೆ ಗ್ರಾಮದ ಸರ್ವೆ ನಂ.೨ರಲ್ಲಿ ಈ ಹಿಂದೆ ಸರಕಾರ ೨೦ ಕುಟುಂಬಗಳಿಗೆ ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರ ಪಡೆದುಕೊಂಡು ವಾಸ ಮಾಡುತ್ತಿದ್ದಾರೆ. ಕೆಲವರು ಅರ್ಜಿಯನ್ನು ಸಹ ಹಾಕಿಕೊಂಡಿರುತ್ತಾರೆ. ಈ ಸ್ಥಳದಲ್ಲಿ ಬಡವರು ಮನೆ ಕಟ್ಟಿರುವ ಜಾಗವಿದ್ದು, ನಮ್ಮ ಮನೆಗೆ ಮತ್ತು ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ತೈಲಗೆರೆ ನಿವಾಸಿ ಪ್ರವೀಣ್ ಎಂಬುವವರು ಬೇಕೆಂತಲೇ ಮನೆಕಟ್ಟಲು ಮುಂದಾಗಿದ್ದನ್ನು ವಿರೋಧಿಸಿ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸರು ದೂರಿಗೆ ಸ್ಪಂಧಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಗೆ ಅಡ್ಡಲಾಗಿ ಕಟ್ಟುತ್ತಿದ್ದ ಮನೆಯ ಪಾಯವನ್ನು ತೆರವುಗೊಳಿಸಿದ್ದಾರೆ.

ತೆರವುಗೊಳಿಸಿದ ಮಾರನೇಯ ದಿನದಲ್ಲಿ ಆ ಜಾಗದಲ್ಲಿ ಕೆಲ ಮನೆಬಳಕೆ ಸಾಮಗ್ರಿಗಳನ್ನಿಟ್ಟು ಸುಮಾರು ೨೦ ವರ್ಷಗಳಿಂದ ಇಲ್ಲಿ ವಾಸವಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ತಹಶೀಲ್ದಾರ್‌ಗೆ ಅರ್ಜಿಯಲ್ಲಿ ನೀಡಿರುತ್ತಾರೆ. ಈ ಬೆಳವಣಿಗೆಗೆ ಕೆಲವು ರಾಜಕೀಯ ಮುಖಂಡರ ಕೈವಾಡ ಎದ್ದುಕಾಣುತ್ತಿದೆ. ತಹಶೀಲ್ದಾರ್‌ರವರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ತೈಲಗೆರೆ ಗ್ರಾಮದ ಸರ್ವೆ ನಂ.೨ರಲ್ಲಿ ಆಗುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಾನೂನು ರೀತಿಯಲ್ಲಿ ಬಗೆಹರಿಸಿಕೊಡಬೇಕು ಮತ್ತು ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದರು.

Be the first to comment

Leave a Reply

Your email address will not be published.


*