ಸಮುದ್ರದ ಭಾರೀ ಅಲೆಗೆ ದೋಣಿ ಮುಳುಗಡೆ: ಓರ್ವ ನಾಪತ್ತೆ, ಮೂವರ ರಕ್ಷಣೆ

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

CHETAN KENDULI

ಹೊನ್ನಾವರ:

ತಾಲೂಕಿನ ಕಾಸರಕೋಡ ಇಕೋ ಬೀಚ್ ಹತ್ತಿರ ಸಮುದ್ರದ ಭಾರೀ ಅಲೆಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕಾಸರಕೋಡ ಗ್ರಾಮದಿಂದ ನಾಡದೋಣಿ ಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದ ಮೀನುಗಾರಿಕಾ ದೋಣಿ ಸಮುದ್ರದ ಮುಳುಗಿದೆ. ಆದ್ದರಿಂದ ದೋಣಿಯಲ್ಲಿದ್ದ ಉದಯ ತಾಂಡೇಲ್ ಎಂಬ ಮೀನುಗಾರ ಕಾಣೆಯಾಗಿದ್ದು, ದೋಣಿಯಲ್ಲಿದ್ದ ಇನ್ನುಳಿದ ಮೀನುಗಾರರಾದ ವಿಜಯ್ ಕ್ರಿಸ್ತಾದಾಸ್ ಪರ್ನಾಂಡೀಸ್, ಶಂಕರ ಮಾದೇವ ತಾಂಡೇಲ್, ಕಾಮೇಶ್ವರ ದೇವಯ್ಯ ತಾಂಡೇಲ್ ಇವರು ಈಜಿಕೊಂಡು ದಡ ಸೇರಿದ್ದು ಸುರಕ್ಷಿತವಾಗಿದ್ದಾರೆ. ಕಾಣೆಯಾದ ಮೀನುಗಾರರ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.

Be the first to comment

Leave a Reply

Your email address will not be published.


*