ಜಿಲ್ಲಾ ಸುದ್ದಿಗಳು
ಪೂಜಾರಹಳ್ಳಿ:
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮದಲ್ಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕುಡಿಯೋ ನೀರಿಗಾಗಿ ನಿತ್ಯ ದೇವರ ಆರಾಧನೆ ಮಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಲವು ತಿಂಗಳಿಂದ ನೀರಿಗಾಗಿ ನಿತ್ಯ ಆಹಾಕಾರ ನಿರ್ಮಾಣವಾಗಿದ್ದು ತಾತ್ವಾರ ಸೃಷ್ಟಿಯಾಗಿದೆ, ಜನ ಪ್ರತಿನಿಧಿಗಳ ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಕಲ್ಲಳ್ಳಿ ಗ್ರಾಮದ ಮಧ್ಯೆ ಇರುವ ಎಸ್ಸಿ ಕ್ಯಾಂಪಿನಲ್ಲಿ,ಹಲವು ತಿಂಗಳುಗಳಿಂದ ನೀರು ಪೂರೈಕೆ ಇಲ್ಲವಾಗಿದೆ, ಈಕುರಿತು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದೆಯಾದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ದುರ್ಗಪ್ಪ ಮಾತನಾಡಿ, ನೀರಿನ ಸಮಸ್ಯೆಯಾಗಿದೆ ಶೀಘ್ರವೇ ಬೋರ್ ಹಾಕಿಸುತ್ತೇವೆ ಪಾಯಿಂಟನ್ನು ಮಾಡಲಾಗಿದೆ ಎಂದರು.ಈಗ ಸರಬರಾಜಾಗುವ ಅಲ್ಪ ಪ್ರಮಾಣದ ನೀರು 35 ಮನೆಗಳಿಗೆ ಸಾಲದು ವಾಸಿಸುವ ಕುಟುಂಬಗಳಿದ್ದು ನೀರು ಸಾಕಾಗುತ್ತಿಲ್ಲ ಎಂದು ಹೇಳಿದರು. ಇನ್ನು ಮಹಿಳೆಯರು ಪಂಚಾಯಿತಿ ಕಡೆಯಿಂದ ಸಮರ್ಪಕವಾಗಿ ನೀರು ಒದಗಿಸುತ್ತಿಲ್ಲ,ಕಾರಣ ಗ್ರಾಮದ ಹೊರವಲಯದಲ್ಲಿಯ ಜಮೀನುಗಳಿಗೆ ಹೋಗಿ ನೀರು ತರುತ್ತಿದ್ದೇವೆ.ನೀರು ಬಿಡುವ ಜಮೀನು ಮಾಲೀಕರಿಗೆ ಗ್ರಾಮ ಪಂಚಾಯಿತಿಯಿಂದ ಸರಿಯಾದ ರೀತಿಯಲ್ಲಿ ಹಣ ನೀಡಿದ್ದಲ್ಲಿ,ನಮಗೆ ಸ್ವಲ್ಪ ನೀರು ಕುಡಿಯಲೂ ಬಿಡುತ್ತಾರೆ ಅವರಿಗೆ ಸಹ ಸರಿಯಾದ ರೀತಿಯಲ್ಲಿ ಹಣ ಕೊಡುತ್ತಿಲ್ಲ.
ದೂರದ ಜಮೀನುಗಳಿಂದ ನೀರು ತಂದು ಸಾಕಾಗಿಹೋಗಿದೆ ಬೇಸಿಗೆ ಕಾಲದಲ್ಲಿ ದನ ಕುರಿ ಮೇಕೆಗಳಿಗೆ ಅಂತೂ ವಿಪರೀತ ತೊಂದರೆ ಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಇಲಾಖಾಧಿಕಾರಿ ಬೋರ್ ವೆಲ್ ಹಾಕಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಎರೆಡು ಬೋರ್ವೆಲ್ಲ ಗಳ ಅಗತ್ಯವಿದ್ದು ಶೀಘ್ರ ಹಾಕಿಸಬೇಕಿದೆ ಕುಡಿಯೋ ವ್ಯವಸ್ಥೆ ಮಾಡಬೇಕಿದೆ, ಅದರಿಂದಾಗಿ ದನಕರುಗಳಿಗೆ ನಮಗೂ ನೀರಿನ ವ್ಯವಸ್ಥೆ ಮಾಡಿಕೊಟ್ಟಂತಾಗುತ್ತದೆ. ನಿರ್ಲಕ್ಷ್ಯ ವಹಿಸಿದಲ್ಲಿ ಗ್ರಾಪಂ ಮುತ್ತಿಗೆ ಹಾಕಲಾಗುವುದೆಂದು ಗ್ರಾಪಂ ಮಾಜಿ ಸದಸ್ಯ ದುರುಗಪ್ಪ,ಗ್ರಾಮದ ಹಿರಿಯರಾದ ಕರಿಬಸಪ್ಪ, ನಿಂಗಮ್ಮ, ತಿಪ್ಪಮ್ಮ, ಶಿಲ್ಪಮ್ಮ, ಲಕ್ಷ್ಮೀ, ಸಕ್ಕರಮ್ಮ, ರೂಪಮ್ಮ, ಊರಿನ ಗ್ರಾಮಸ್ಥರು ಎಚ್ಚಸಿದ್ದಾರೆ.
Be the first to comment