ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕಾರೋನಾ ಹೆಮ್ಮಾರಿಯಿಂದ ದೇಶವೇ ತತ್ತರಿಸುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ದೊಡ್ಡ ಹಬ್ಬವದ ರಂಜಾನ ಬಂದಿದ್ದು ಹಬ್ಬ ಆಚರಣೆಯನ್ನು ಮಾಡದ ಸ್ಥಿತಿಯಲ್ಲಿ ಜನರಿದ್ದಾರೆ. ಅದರಲ್ಲೂ ದಿನ ಕೂಲಿಕಾರ್ಮಿಕರ ಪಾಡು ಹೇಳತೀರಾದಾಗಿದೆ. ಇಂತಹ ಸಮಯದಲ್ಲಿ ಬಡ ನಿರ್ಗತಿಕರಿಗೆ ಕಿಟ್ ಕೊಡುವ ಮೂಲಕ ಸಲಾಂ ಭಾರತ ಟ್ರಸ್ಟ್ ಸಮಾಜಮುಖಿ ಕಾರ್ಯ ಮಾಡಿದೆ.
ಹೌದು, ಸಲಾಂ ಭಾರತ ಟ್ರಸ್ಟ್ ಇಂತಹ ಅನೇಕ ಕಾರ್ಯಗಳನ್ನು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದು ಕಾರೋನಾ ಸಂಧಿಗ್ಧ ಪರಿಸ್ಥಿತಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಬಂದು ಬಡವರಿಗೆ ಸಹಾಯಹಸ್ತವಾಗಿದೆ. ಸುಮಾರು 200 ಕಿಟಗಳನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ. ಕೆ. ಮುಲ್ಲಾ, ಕಾರ್ಯದರ್ಶಿ ಅಬ್ದುಲ್ ವಜೀದ್ ಹಡಲಗೇರಿ, ಅನ್ವರ, ಮೆಹಬೂಬ್ ಇದ್ದರು.
Be the first to comment