ಲಾಕ್ ಡೌನ್ ಮಾಯ! ಕ್ಯಾರೆ ಎನ್ನದ ಸಾರ್ವಜನಿಕರು -ಹುನಗುಂದ ತಾಲೂಕಾಡಳಿತ ವಿಫಲ:ಒಂದೆ ದಿನ‌ ಜಿಲ್ಲೆಯಾದ್ಯಂತ 1563 ಸೊಂಕು ದೃಢ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

 ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

CHETAN KENDULI

ಕೊರೊನ ಎರಡನೇ ಅಲೆಯು ದಿನದಿಂದ ದಿನಕ್ಕೆ ಸಾರ್ವಜನಿಕರ ಮೇಲೆ ತನ್ನ ತಾರುಪತ್ಯವನ್ನು ತೋರುತ್ತಿದ್ದು ಇಂದು ಒಂದೆ ದಿನ ಜಿಲ್ಲೆಯಾದ್ಯಂತ 1563 ಜನರಿಗೆ ಸೊಂಕು ದೃಢ ವಾಗಿದ್ದು ಇದರ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಠಿಣ ಕ್ರಮ ಕೈಗೊಂಡು ಜಾಗೃತಿ ಮೂಡಿಸಿದರು ಯಾವುದೇ ಪ್ರಯೋಜನವಾಗುತಿಲ್ಲ, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ಕಠಿಣ ಕಾನೂನು ನಿಯಮ ಜನರು ಪಾಲಿಸುತ್ತಿದ್ದಾರೆ ಇಲ್ಲವೋ ಎನ್ನುವುದು ಸರ್ಕಾರ ನೋಡುತ್ತಿಲ್ಲ.

ಕಳೆದ ಎರಡು ವಾರದ ಹಿಂದೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಕೈಗೊಳ್ಳಲಾಗಿದ್ದರು ಯಾವುದೇ ರೀತಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖ ಕಾಣುತ್ತಿಲ್ಲ ಅದರಿಂದ ಸರ್ಕಾರ ಮತ್ತೆ ಒಂದು ಹೆಜ್ಜೆ ಮುಂದು ಇಟ್ಟಿದ್ದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೇ.೨೫ ರವರೆಗೆ ಬೆಳಿಗ್ಗೆ ೬ ರಿಂದ ೧೦ರ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಿ ಲಾಕ್ ಡೌನ್ ಜಾರಿಮಾಡಿವುದರಿಂದ ಸರ್ಕಾರ ಮಾಡಿರುವ ತಪ್ಪು ಎನ್ನುವಂತಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 23138 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 17266 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ 537, ಬಾದಾಮಿ 205, ಜಮಖಂಡಿ 270, ಹುನಗುಂದ 251, ಮುಧೋಳ 190, ಬೀಳಗಿ 110 ಜನರಲ್ಲಿ ಸೋಂಕು ದೃಡಪಟ್ಟಿವೆ.

ಸರ್ಕಾರ ಕೊರೊನ ಪ್ರಕರಣಗಳನ್ನು ನಿಯಂತ್ರಣ ತರಲು ಲಾಕ್ ಡೌನ್ ಜಾರಿ ಮಾಡಿದ್ದಾರೆ ಆದರೆ ಸಾರ್ವಜನಿಕರು ಅನವಶ್ಯಕವಾಗಿ ರಸ್ತೆಗಿಳಿದು ಓಡಾಟ ಮಾಡುತಿದ್ದಾರೆ.ಇಂದು ಬೆಳಿಗ್ಗೆ ಹುನಗುಂದ ನಗರದ ಬಹುತೇಕ ರಸ್ತೆಗಳು ಜನರಿಂದ ತುಂಬಿರುವ ಘಟನೆ ಕಂಡು ಬಂದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದ ಮೇಲೆ ಒತ್ತಡವನ್ನು ನೀಡುತ್ತಿದ್ದು, ಜಿಲ್ಲಾಡಳಿತವು ಹಲವಾರು ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ ಆದರೆ ಹುನಗುಂದ ತಾಲೂಕಾಡಳಿತದ ಸೂಚನೆಗಳನ್ನು ಗಾಳಿಗೆ ತೂರಿ ಯಾವುದಕ್ಕೆ ಬಯ ಪಡದೆ ಮಾಸ್ಕ್ ದರಿಸದೆ ಜನರು ಓಡಾಟ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅಂಗಡಿಯ ಮಾಲೀಕರು ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಹೇಳದೆ ವ್ಯಾಪಾರವನ್ನು ನಡೆಸುತ್ತಿದ್ದಾರೆ.
ದಿನಸಿ ಅಂಗಡಿ ಮುಂದೆ ಜನರು ಗುಂಪು ಗುಂಪಾಗಿ ನಿಂತು ದಿನಸಿಯನ್ನು ಖರೀದಿ ಮಾಡುತ್ತಿದ್ದು ಇದರಿಂದ ಜಿಲ್ಲಾಡಳಿತ ಅಥವಾ ನಗರಸಭೆ ಯಾವುದೇ ಅಧಿಕಾರಿಯು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡುತ್ತಿಲ್ಲ ಇದರಿಂದ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳು ಎದ್ದು ಕಾಣುವ ಪರಸ್ಥಿತಿ ಎದುರಾಗುತ್ತಿದೆ.

Be the first to comment

Leave a Reply

Your email address will not be published.


*