ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಚುನಾವಣಾ ಕಣ- ಬಿಜೆಪಿ, ಕಾಂಗ್ರೆಸ್ ನಡುವಿನ ನೇರ ಹಣಾಹಣಿ ..! ಸಮೀಕ್ಷೆ ಪ್ರಕಾರ ಯಾರಿಗೆ ಗದ್ದುಗೆ???… !!!

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಕಾರವಾರ:

CHETAN KENDULI

ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆ ಕಣ, ಬಿಜೆಪಿಯಿಂದ ಗಣಪತಿ ಉಳ್ವೇಕರ್, ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ನಡುವೆ ನೇರ ಹಣಾಹಣಿ ಜಿಲ್ಲೆಯಲ್ಲಿ ಶೇ 99.73ಮತದಾನವಾಗಿದ್ದು, ಕಾರವಾರ,ಅಂಕೋಲಾ, ಶಿರಸಿ, ಸಿದ್ದಾಪುರ, ಜೋಯಿಡಾ,ದಾಂಡೇಲಿ,ಹಳಿಯಾಳ ದಲ್ಲಿ ಶೇ. 100ರಷ್ಟು ಮತದಾನವಾಗಿದೆ.

ಚುನಾವಣೆ ನಡೆಯುವ ಎರಡು ದಿನದ ಮೊದಲು 50-50 ಅನುಪಾತಕ್ಕೆ ಎರಡು ಪಕ್ಷಗಳ ಲೆಕ್ಕಾಚಾರ ಬಂದು ನಿಂತಿತ್ತು. ಎಲ್ಲಿ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕರಿಗೆ ಟಿಕೇಟ್ ಘೋಷಣೆ ಆಯಿತೋ ಹಲವು ಬದಲಾವಣೆ ,ಲೆಕ್ಕಾಚಾರಗಳು ನಡೆಯುವ ಮೂಲಕ ನಿಧಾನವಾಗಿ ತನ್ನ ಶಕ್ತಿ ವೃದ್ದಿಸಿಕೊಂಡಿತು. ಆದರೇ ಬಿಜೆಪಿ ತನ್ನ ಬಾರಿಯನ್ನು ಮುಗಿಸಿ ಚುರುಕಿನಿಂದ ಪ್ರಚಾರದಲ್ಲಿ ಹೆಚ್ಚು ತೊಡಗಿದ್ದು, ಕಾಂಗ್ರೆಸ್ ಪ್ರಚಾರ ನಿಧಾನಗತಿಯಲ್ಲಿ ಸಾಗಿತ್ತು.

ಜಿಲ್ಲೆಯಲ್ಲಿ ಹೇಗಿತ್ತು ಪಕ್ಷದ ಅಲೆ??

ಅಬ್ಬರದ ಪ್ರಚಾರ ಕೈಗೊಂಡಿದ್ದ ಎರಡೂ ಪಕ್ಷಗಳು ಒಳ ಗುಟ್ಟನ್ನು ಬಿಟ್ಟುಕೊಡದೇ ಒಳತಂತ್ರ ಹೆಣೆದಿತ್ತು. ಶಾಸಕರಿಗೆ ಸಚಿವರಿಗೆ ಮತ ಸೆಳೆಯುವ ಹೊಣೆಯನ್ನು ಬಿಜೆಪಿ ಹೊರಿಸಿತ್ತು.

ಮತ ಸೆಳೆಯುವ ದಿಕ್ಕಿನಲ್ಲಿ ಬಿಜೆಪಿ ಶಾಸಕರು ತನ್ನ ಎಲ್ಲಾ ಬಲ ಉಪಯೋಗಿಸಿದ್ದರೂ ಮತದಾರರನ್ನು, ಅವರು ಕಾಂಗ್ರೆಸ್ ನವರು ,ಇವರು ಪಕ್ಷೇತರರು ಎಂದು ವಿಂಗಡಿಸಿ ತಮಗೆ ತೋಚಿದವರಿಗೆ ಮಾತ್ರ ಬೆಂಬಲವನ್ನು ಕೇಳಿದರು ಇದು ಮತ ಗಳಿಕೆಯಲ್ಲಿ ಬಿಜೆಪಿ ಎಡವಲು ಮೂಲ ಕಾರಣವಾಗಿತ್ತು. ಶಾಸಕರ ಮೇಲಿನ ಅಸಮದಾನವೇ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿ ಮಾರ್ಪಟ್ಟಿತ್ತು.

ಸಮೀಕ್ಷೆಯ ಮಾಹಿತಿ ಪ್ರಕಾರ:

* ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 48% ,ಬಿಜೆಪಿ-52% ಬೆಂಬಲ

* ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ -55% ,ಬಿಜೆಪಿ-45% ಬೆಂಬಲ ಪಡೆದಿದೆ.

* ಹಳಿಯಾಳವಿಧಾನಸಭಾ ಕ್ಷೇತ್ರ – 50% ಕಾಂಗ್ರೆಸ್, 50%ಬಿಜೆಪಿ (ಇಲ್ಲಿ ಅನುಪಾತ ಬದಲಾಗಲಿದೆ.)

*ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ- ಕಾಂಗ್ರೆಸ್ -55% ಬಿಜೆಪಿ-45% ಬೆಂಬಲ

* ಜೋಯಿಡಾ ಭಾಗದಲ್ಲಿ 45% ಬಿಜೆಪಿ ,55% ಕಾಂಗ್ರೆಸ್ ಬೆಂಬಲ

* ಯಲ್ಲಾಪುರ ವಿಧಾನಸಭಾ ಕ್ಷೇತ್ರ- ಬಿಜೆಪಿ-55% ಕಾಂಗ್ರೆಸ್ -45% ಬೆಂಬಲ

* ದಾಂಡೇಲಿ ಭಾಗದಲ್ಲಿ 60%ಕಾಂಗ್ರೆಸ್ ,40% ಬಿಜೆಪಿ ಬೆಂಬಲ ಪಡೆದಿದೆ.

*ಕಾರವಾರ -ಅಂಕೋಲಾ ವಿಧಾನ ಸಭಾ ಭಾಗದಲ್ಲಿ 60%ಬಿಜೆಪಿ ,ಕಾಂಗ್ರೆಸ್ 40% ಬೆಂಬಲ ಪಡೆದಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ಸಮಬಲ ಎಂದು ಕಂಡರೂ ಚುನಾವಣೆ ದಿನದ ಅಂಕಿ ಅಂಶ ತೆಗೆದುಕೊಂಡರೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮುಂದಿದ್ದಾರೆ.ಈ ಬಾರಿಯ ಚುನಾವಣೆ ಗೆಲ್ಲುವ ಎಲ್ಲಾ ಅವಕಾಶಗಳು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕರಿಗಿದೆ. ಈ ಬಾರಿ ವ್ಯಕ್ತಿಗಳನ್ನು ನೋಡಲಾಗಿದ್ದು , ಜಿಲ್ಲೆಯಲ್ಲಿ ಬಿಜೆಪಿ ಹವ ಇದ್ದರೂ ಹಣ ಕೂಡ ವರ್ಕೌಟ್ ಆಗಿದೆ‌. 

ಬಿಜೆಪಿ ಆಂತರಿಕ ಗುದ್ದಾಟ ಸಹ ಉಳ್ವೇಕರ್ ಗೆ ಕಂಟಕವಾಗಿದ್ದು, ಬಿಜೆಪಿಯ ಗಣಪತಿ ಉಳ್ವೇಕರ್ ಗೆ ಪಕ್ಷದ ನಾಯಕರೇ ವಿಲನ್ ಗಳಾಗಿದ್ದಾರೆ. ಮತ ಹೆಚ್ಚಿಸುಕೊಳ್ಳುವಲ್ಲಿ ಇದೇ ಮೈನಸ್ ಪಾಯಿಂಟ್ ಆಗಿದೆ. ಎಂ.ಪಿ ಅನಂತ ಕುಮಾರ್ ಹೆಗಡೆಯವರು ಈ ಬಾರಿ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಪ್ರಚಾರ ನಡೆಸದೆ ಇರುವುದು ಕೂಡ ಬಿ.ಜೆ.ಪಿ ಅಭ್ಯರ್ಥಿ ಗಣಪತಿ ಉಲ್ವೇಕರ್ ಅವರಿಗೆ ಮತ ಬೇಟೆಯಲ್ಲಿ ಹಿನ್ನಡೆ ಆಗಿದೆ.

ಲೆಕ್ಕಾಚಾರದ ಕ್ಷೇತ್ರವಾರು ಮಾಹಿತಿ ಕಲೆಹಾಕಿ ಮಾಡಿದ ಸಮೀಕ್ಷೆಯಿಂದ ತಿಳಿದ ಮಾಹಿತಿ ಪ್ರಕಾರ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ರವರು ಗೆಲ್ಲುವ ಸಾಧ್ಯತೆಗಳು ಅಧಿಕವಾಗಿದೆ. ಇದು ಕೇವಲ ಸಮೀಕ್ಷೆಯಷ್ಟೇ ಹೊರತು ಫಲಿತಾಂಶವಲ್ಲ್ಲ. ಎಲ್ಲವೂ ಇದೇ ತಿಂಗಳ 14ರಂದು ಫಲಿತಾಂಶ ಎಲ್ಲರಿಗೂ ಉತ್ತರ ನೀಡಲಿದೆ.

Be the first to comment

Leave a Reply

Your email address will not be published.


*