ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರತಿಯೊಬ್ಬರು ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ಲಸಿಕೆಯನ್ನು ಪಡೆದರೆ ಕೊರೊನಾ ಸೋಂಕು ಮುಕ್ತವನ್ನಾಗಿಸಲು ಸಹಕಾರಿಯಾಗುತ್ತದೆ ಎಂದು ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಸರಕಾರಿ ಹಳೇ ಶಾಲೆ ಆವರಣದಲ್ಲಿ ಗ್ರಾಪಂ ಮತ್ತು ಈಶಾ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊರೊನಾ ಹೆಮ್ಮಾರಿಯು ಇಡೀ ಜನ ಜೀವನನ್ನು ಬುಡಮೇಲು ಮಾಡಿದೆ. ವಿಶ್ವವನ್ನೇ ತಲ್ಲಣಗೊಳಿಸಿದ ಸಾಂಕ್ರಾಮಿಕ ರೋಗದಿಂದ ಹಲವಾರು ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಈಶ ಫೌಂಡೇಷನ್ ಸಹಕಾರದಲ್ಲಿ ೧ ಸಾವಿರ ಲಸಿಕೆಯನ್ನು ಉಚಿತವಾಗಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಗ್ರಾಮಸ್ಥರಿಗೆ ಏಕಕಾಲದಲ್ಲಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಈ ಮೊದಲು ಕೋವಿಡ್ ಲಸಿಕೆಯನ್ನು ಪಡೆಯಲು ಜನರು ಮುಂದಾಗುತ್ತಿರಲಿಲ್ಲ. ಕಾಲ ಕಳೆದಂತೆ ಜನರು ಇದೀಗ ಲಸಿಕೆಗಾಗಿ ಮುಂದಾಗುತ್ತಿರುವುದು ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡದಂತೆ ಪ್ರಥಮ ಚಿಕಿತ್ಸೆಯಲ್ಲಿಯೇ ಗುಣಪಡಿಸಲು ಸಹಕಾರಿಯಾಗುತ್ತಿದೆ. ಎಲ್ಲರೂ ಸರಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಲಸಿಕೆ ಪಡೆದ ನಂತರ ಸೋಂಕು ಹರಡುವುದಿಲ್ಲ ಎಂಬ ನಿರ್ಲಕ್ಷ್ಯ ಭಾವನೆ ಇರಕೂಡದು ಎಂದು ಸಲಹೆ ಮಾಡಿದರು.
ಗ್ರಾಪಂ ಉಪಾಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿಕೊಂಡಿತ್ತು. ಗ್ರಾಪಂ ವತಿಯಿಂದ ಕೊರೊನಾ ನಿಯಮಗಳ ಪಾಲನೆಯನ್ನು ಪ್ರಚಾರಗೊಳಿಸಿದ ಹಿನ್ನಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವುದರ ಮೂಲಕ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಸರಕಾರ ಈಗಾಗಲೇ ಪಿಎಚ್‌ಸಿಗಳಲ್ಲಿ ಲಸಿಕೆಯನ್ನು ಆಧ್ಯತೆಯ ಮೆರೆಗೆ ನೀಡುತ್ತಿದೆ. ಇದೀಗ ಸಂಘ ಸಂಸ್ಥೆಯೊಂದು ೧ ಸಾವಿರ ಲಸಿಕೆ ನೀಡುತ್ತಿರುವುದು ಶ್ಲಾಘನೀಯವಾದ್ದದು, ಈ ವೇಳೆಯಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದರು.ಈ ವೇಳೆಯಲ್ಲಿ ಗ್ರಾಪಂ ಪಿಡಿಒ ಗಂಗರಾಜು, ಕಾರ್ಯದರ್ಶಿ ಪದ್ಮಮ್ಮ, ಗ್ರಾಪಂ ಸದಸ್ಯರು, ಸಿಬ್ಬಂದಿಗಳು, ಈಶಾ ಫೌಂಡೇಷನ್‌ನ ಮುಖ್ಯಸ್ಥರು, ಪದಾಧಿಕಾರಿಗಳು ಇದ್ದರು.
Be the first to comment