ಜಿಲ್ಲಾ ಸುದ್ದಿಗಳು
ಕೋಟ
ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಕೊರಗ ಸಮುದಾಯದವರ ಮೇಲಾದ ಪೊಲೀಸ್ ದೌರ್ಜನ್ಯ ಹಾಗೂ ಸಮುದಾಯದವರ ವಿರುದ್ಧ ದೂರು ದಾಖಲಿಸಿರುವ ಪ್ರಕರಣದ ತನಿಖೆಯನ್ನು ಸಿಒಡಿಗೆ ನೀಡುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.ಇಂದು ಕೋಟತಟ್ಟುವಿನ ಕೊರಗ ಕಾಲೋನಿಯದ ಕೊರಗ ಸಮುದಾಯದ ಮನೆಗೆ ಭೇಟಿ ನೀಡಿದ ಅವರು, ಸಮುದಾಯವರೊಂದಿಗೆ ಮಾತನಾಡಿ ಪೊಲೀಸರು ದೂರು ದಾಖಲಿಸಿದ 6 ಮಂದಿಗೆ ತಲಾ 2 ಲಕ್ಷ ಪರಿಹಾರ ನೀಡುವ ಘೋಷಣೆ ಮಾಡಿದರು ಅಲ್ಲದೆ ಸ್ಥಳದಲ್ಲಿ ಮೊದಲ ಕಂತಾಗಿ 50,000 ಸಾವಿರ ರೂ ಚೆಕ್ ನ್ನು 6 ಮಂದಿಗೆ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಕೊರಗ ಸಮುದಾಯವರು ಹೆದರುವ ಅಗತ್ಯ ಇಲ್ಲ ಸರಕಾರ ಹಾಗೂ ಅಧಿಕಾರಿಗಳು ನಿಮ್ಮ ಜೊತೆಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಭರವಸೆ ನೀಡಿದರು. ಹಾಗೂ ಈಗಾಗಲೇ ಇರುವ ಸಮುದಾಯದ ಬೇಡಿಕೆಗಳನ್ನು ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.ಕೊರಗ ಸಮುದಾಯದ ಮೇಲೆ ಹಾಕಲಾಗಿರುವ ದೂರು ಆಕಸ್ಮಿಕ ಹಾಗೂ ಉದ್ದೇಶಪೂರ್ವಕವಾಗಿದೆ. ಘಟನೆಗೆ ಸಂಬಂಧಿಸಿ 2 ದಿನಗಳ ನಂತರ ಪೊಲೀಸರು ದೂರು ದಾಖಲಿಸಿರುವುದನ್ನು ಗಮನಿಸಿದರೆ ಇದೊಂದು ಸುಳ್ಳು ದೂರು ಎಂದು ಗೊತ್ತಾಗುತ್ತದೆ. ಪೊಲೀಸರು ಈ ರೀತಿ ಸುಳ್ಳು ದೂರು ದಾಖಲಿಸಿರುವುದು ದೊಡ್ಡ ಅಪರಾಧ,
ರೌಡಿಗಳನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡುತ್ತೇವೆ ಇಲ್ಲಿ ಪೊಲೀಸರೇ ರೌಡಿಗಳಂತೆ ವರ್ತಿಸಿದರೆ ಯಾರು ಏನು ಮಾಡುವುದು. ಘಟನೆ ನಡೆದ ದಿನ ಸಮುದಾಯದವರನ್ನು ಠಾಣೆಗೆ ಕರೆದುಕೊಂಡು ಹೋಗಿರುವ ವಿಚಾರ ಹಿರಿಯ ಅಧಿಕಾರಿಗಳಿಗೆ ತಿಳಿಸಿಲ್ಲ. ಪೊಲೀಸರ ವರ್ತನೆ ಪೊಲೀಸ್ ಇಲಾಖೆಯ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟಾಗುವಂತೆ ಮಾಡಿದೆ ಎಂದರು. ಘಟನೆಯ ತನಿಖೆಯನ್ನು ಸಿಒಡಿಗೆ ಒಪ್ಪಿಸಲಾಗಿದೆ. ಇದರಿಂದ ಘಟನೆಯ ತನಿಖೆ ಸರಿಯಾಗಿ ಆಗಲಿದ್ದು, ಸತ್ಯಾಂಶ ಹೊರಬರಲಿದೆ ಎಂದರು ಹಾಗೂ ಘಟನೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೊರಗ ಸಮುದಾಯಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು.
Be the first to comment