ತಂಗಡಗಿಯಲ್ಲಿ ಅಕ್ರಮ ಮದ್ಯ ಸಂಗ್ರಹದಲ್ಲಿ ಸ್ಥಳೀಯ ಅಭಕಾರಿ ಅಧಿಕಾರಿಗಳ ಶಾಮೀಲು…!!! ಮುದ್ದೇಬಿಹಾಳ ಗ್ರಾಮ ಪಂಚಾಯತಿ ಚುನಾವಣೆಯನ್ನು ನಿಸ್ಪಕ್ಷಪಾತವಾಗಿ ನಡೆಯುವಂತೆ ಮಾಡಿ: ಸಾಮಾಜಿಕ ಹೋರಾಟಗಾರ ಅಶೋಕ ನಿಡಗುಂದಿ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಡಿ.16:

CHETAN KENDULI

ಗ್ರಾಮೀಣ ಮಟ್ಟದಲ್ಲಿ ಅಕ್ರಮವಾಗಿ ಮದ್ಯಪಾನ ಸಂಗ್ರಹಿಸಿಟ್ಟಿದ್ದು ಹಾಗೂ ಅನಧಿಕೃತ ಡಾಬಾಗಳಲ್ಲಿಯೂ ಅಕ್ರಮವಾಗಿ ಮದ್ಯ ನೀಡಲು ಅನುಮತಿಸಿ ಗ್ರಾಮ ಪಂಚಾಯತಿ ಚುನಾವಣೆಯನ್ನು ನಿಸ್ಪಕ್ಷಪಾತವಾಗಿ ನಡೆಯಲು ಸ್ಥಳೀಯ ಅಭಕಾರಿ ಇಲಾಖೆಯವರು ಬಿಡುತ್ತಿಲ್ಲ. ಕೂಡಲೇ ಇದರ ಬಗ್ಗೆ ರಾಜ್ಯ ಚುನಾವಣೆ ಆಯೋಗವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೋರಾಟಗರ ಅಶೋಕ ನಿಡಗುಂಡಿ ಮನವಿ ಮಾಡಿದ್ದಾರೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ ಅವರು, ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ವ್ಯಾಪ್ತಿಯ ಕೆಬಿಜೆಎನ್‌ಎಲ್ ಕಾಲುವೆಗಳಲ್ಲಿ ಅಕ್ರಮವಾಗಿ ಮದ್ಯಗಳನ್ನು ಈಗಾಗಲೇ ಸಂಗ್ರಹಿಸಿ ಇಡಲಾಗಿದೆ. ಇದರ ಬಗ್ಗೆ ಮುದ್ದೇಬಿಹಾಳ ಅಭಕಾರಿ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರೂ ಅಧಿಕಾರಗಳು ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಇದರಿಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮದ್ಯ ಆಮೀಷ ನೀಡಿ ಮತದಾನದ ಹಕ್ಕಿಗೆ ಚ್ಯೂತಿ ಬರುವಂತೆ ಮಾಡಿದಂತಾಗುತ್ತದೆ ಎಂದ ಅವರು ದೂರಿದರು.


 



ಗಾಳಿಗೆ ತೂರಿದ ಭೂ ಕಂದಾಯ ಇಲಾಖೆಯ 1964ರ 96ರ ನಿಯಮ:
ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮ ವ್ಯಾಪ್ತಿಯಲ್ಲಿ ಕೆಬಿಜೆಎನ್‌ಎಲ್ ಕಾಲುವೆ ದಂಡಿಯಲ್ಲಿಯೇ ವಿವಿಧ ಡಾಬಾಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ಈ ಡಾಬಾಗಳಲ್ಲಿ ಮದ್ಯವೂ ದೊರಕುವಂತಾಗಿದೆ. ಇದು ಇಲ್ಲಿಯ ಅಭಕಾರಿ ಇಲಾಖೆಯವರಿಗೆ ಗೊತ್ತಿದ್ದರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಭೂ ಕಂದಾಯದ 1964ರ 96ನೇ ನಿಯಮ ಉಲ್ಲಂಘನೆಯೂ ಮಾಡಲಾಗಿದೆ.


ಕೂಡಲೇ ಗ್ರಾಮೀಣ ಮಟ್ಟದಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಮದ್ಯ ಬಾಡಲಿಯಿಂದಲೇ ಅಭ್ಯರ್ಥಿಗಳು ಮತಗಳನ್ನು ಪಡೆದು ಪ್ರಜಾಪ್ರಭುತ್ವಕ್ಕೆ ಮಸಿ ಬಳೆದಂತಾಗುತ್ತದೆ ಎಂದು ಮವನಿಯಲ್ಲಿ ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*