ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಡಿ.15:
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕೀಳಮಟ್ಟದ ರಾಜಕಾರಣ ನಡೆಯುತ್ತಿದೆ ಎನ್ನುವುದಕ್ಕೆ ಇತ್ತಿಚಿಗಷ್ಟೇ ವಿರೋಧ ಪಕ್ಷದವರೊಬ್ಬರು ಜೆಡಿಎಸ್ ಪಕ್ಷದ ವಿರುದ್ಧ ಹೇಳಿದ ಮಾತುಗಳೇ ಸಾಕ್ಷಿಯಾಗಿದೆ. ಇಂತಹ ಸಂಸ್ಕೃತಿ ಬಿಟ್ಟು ಮಾತನಾಡುವವರಿಗೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಹೇಳಿದರು.
ತಾಲೂಕಿನ ಪುರಸಭೆ, ತಾಲೂಕ ಪಂಚಾಯತ, ನಾಲತವಾಡ ಪಟ್ಟಣ ಪಂಚಾಯತಿಯಲ್ಲಿಯೂ ಮೂಲ ಜೆಡಿಎಸ್ ಅಭ್ಯರ್ಥಿಗಳೇ ಅಧಿಕಾರದಲ್ಲಿದ್ದಾರೆ ಎನ್ನುವುದು ಉತ್ತಮ ರಾಜಕಾರಣಿಯಾಗಿರುವವರು ಮೊದಲು ಅರಿತುಕೊಳ್ಳಬೇಕು. ಅಲ್ಲದೇ ಕೀಳಮಟ್ಟದ ರಾಜಕಾರಣಿ ಮಾಡುವವರೇ ಮೊದಲು ತಾವುಗಳು ಯಾವ ಪಕ್ಷದಲ್ಲಿದ್ದರು ಎನ್ನುವುದೂ ಅರಿತುಕೊಳ್ಳಬೇಕು. ಜೆಡಿಎಸ್ ಪಕ್ಷ ಸದಾ ಜನರೊಂದಿಗೆ ಹಾಗೂ ಜನ ಹಿತಕ್ಕಾಗಿಯೇ ದುಡಿಯುತ್ತಿದೆ ಎನ್ನುವುದಕ್ಕೆ ಮುದ್ದೇಬಿಹಾಳ ತಾಲೂಕಿನ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅವಿರೋಧದ ಆಯ್ಕೆಯಿಂದ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಸಿ.ಎಂ.ಇಬ್ರಾಹಿಂ ಸೇರ್ಪಡೆ ಹೆಚ್ಚಿನ ಭಲ:
ಕಾಂಗ್ರೆಸ್ ಪಕ್ಷದಲ್ಲಿದ್ದು ದೇಶದಲ್ಲಿಯೇ ತಮ್ಮ ಚಾಪನ್ನು ಮೂಡಿಸಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಹೆಚ್ಚಿನ ಬೆಂಬಲ ದೊರಕಿದಂತಾಗಿದೆ. ಇದರಿಂದ ವಿರೋಧಿಗಳು ಆಡುತ್ತಿರುವ ಲೆಕ್ಕವಿಲ್ಲದ ಮಾತುಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ದೊರಕಲಿದೆ ಎಂದು ಮಂಗಳಾದೇವಿ ಬಿರಾದಾರ ಹೇಳಿದರು.
ಮನೋಹರ ತುಪ್ಪದ ಹೂಆರ್‌ಯೂ..?
ಸಾರಿಗೆ ಇಲಾಖೆ ಸಿಬ್ಬಂದಿಗಳ ಬೇಡಿಕೆಗಳಿಗೆ ಅವರಿಗೆ ಜೆಡಿಎಸ್ ಪಕ್ಷದಿಂದ ಬೆಂಬಲಿಸಿದ್ದ ಸಮಯದಲ್ಲಿ ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂದು ಹೇಳಿಕೆ ನೀಡುವ ಮನೋಹರ ತುಪ್ಪದ ನೀನ್ಯಾರು ಎಂಬುವುದನ್ನು ಮಮೊದಲು ಅರಿತುಕೊಂಡು ಹೇಳಿಕೆಯನ್ನು ನೀಡಬೇಕು. ಸಾರಿಗೆ ಸಿಬ್ಬಂದಿಗಳು ನಮ್ಮ ಬೆಂಬಲವನ್ನು ನೀಡಬೇಕು ಎನ್ನುವ ಮನವಿಗೆ ಸ್ಪಂಧಿಸಿ ಬೆಂಬಲಿಸಲಾಗಿದೆ. ಕೀಲಮಟ್ಟದ ರಾಜಕಾರವನ್ನು ಬಿಟ್ಟು ಹಿಂದೂ ಧರ್ಮದ ಸಂಕೃತಿಯನ್ನು ಅರಿತುಕೊಳ್ಳಿ. ನಿಮ್ಮ ಹೇಳಿಕೆಗೆ ಜೆಡಿಎಸ್ ಪಕ್ಷ ಬಗ್ಗುವುದಿಲ್ಲಾ ಸವಾಲೂ ಆಹಕುವುದಿಲ್ಲ. ಸೊಸೆಗೆ ಒಂದು ಸಮಯ ಹಾಗೂ ಅತ್ತೆಗೆ ಒಂದು ಸಮಯ ಎಂಬಂತೆ ಸಮಯ ಬಂದಾಗ ನೀವೆ ಅರಿಕೊಳ್ಳುವುರಿ ಎಂದು ಮಂಗಳಾದೇವಿ ಬಿರಾದಾರ ಖಾರವಾಗಿ ಮಾತನಾಡಿದರು.
ದಿನದರ್ಶಿಕೆ ಬಿಡುಗಡೆ:
ಮುದ್ದೇಬಿಹಾಳ ಪಟ್ಟಣದ ಜೆಡಿಎಸ್ ಯುವ ಮುಖಂಡ ಅಬ್ದುಲ್‌ಮಜೀದ ಮಕಾನದಾರ ಅವರು ಪಕ್ಷದ ಅಭಿಮಾನಕ್ಕೆ ದಿನದರ್ಶಿಕೆಯನ್ನು ಮುದ್ರಿಸಿದನ್ನು ಮಂಗಳಾದೇವಿ ಬಿರಾದಾರ ಅವರು ಪಕ್ಷದ ಹಿರಿಯರಾದ ಜಲಾಲ ಮುದ್ನಾಳ ಅವರನ್ನು ಸನ್ಮಾನಿಸಿ ಬಿಡುಗಡೆ ಮಾಡಿದರು. ಅಲ್ಲದೇ ಅವಿರೋಧವಾಗಿ ಗ್ರಾಪಂ ಸದಸ್ಯರಾಗಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೆಹಬೂಬ ಕುಂಟೋಜಿ, ಭೀಮನಗೌಡ ಕೊಡಗಾನೂರ, ಅರವಿಂದ ಕಾಶಿನಕುಂಟಿ, ಅರ್ಹದ ಮೋಮಿನ, ರಫೀಕ ನಾಲತವಾಡ, ಮುನ್ನಾ ಮಕಾನದಾರ, ಮುತ್ತು ಮಾದಿನಾಳ, ಈರಣ್ಣ ತರನಾಳ ಸೇರಿದಂತೆ ಇತರರಿದ್ದರು.
Be the first to comment