ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.15:
ಮುದ್ದೇಬಿಹಾಳ ತಾಲೂಕಿನಲ್ಲಿ ಗ್ರಾಮ ಪಂಚಾಯತ ಚುನಾವಣಾ ಸಿಬ್ಬಂದಿಗಳ ನೇಮಕದಲ್ಲಿ ಮೇಲಾಧಿಕಾರಿಗಳು ಎಡವಟ್ಟು ಮಾಡಿದ್ದಾರೆ ಎಂಬುವುದಕ್ಕೆ ಮಂಗಳವಾರ ಢವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಂದ ಮತ್ತೊಮ್ಮೆ ಸಾಭಿತಾದಂತಾಗಿದೆ.
ಢವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಢವಳಗಿ, ಅಗಸಬಾಳ, ಚೊಂಡಿ, ಹಳ್ಳೂರ ಕ್ಷೇತ್ರಗಳಿದ್ದು ಚೊಂಡಿ ಹಾಗೂ ಅಗಸಬಾಳ ಕ್ಷೇತ್ರಗಳಲ್ಲಿ ಅವಿರೋಧವಾಗಿ ಸದಸ್ಯರ ಆಯ್ಕೆಯಾಗಿದೆ. ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರನ್ನು ಅರ್ಜಿ ನಮೂನೆ 10ರಲ್ಲಿ ಸೇರಿಸುವಾಗ ಆರ್‌ಓಗಳು ಉರ್ಫ ಹೆಸರನ್ನು ಸೇರಿಸಿ ಪತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮೊದಲಾಗಿ ನಮೂದಾಗುವ ಅಕ್ಷರ ಹೆಸರನ್ನು ಸೇರಿಸಿದ್ದಾರೆ ಎಂದು ಢವಳಗಿ ವ್ಯಾಪ್ತಿಯ ಜನರು ಆಕ್ರೋಶವನ್ನು ವ್ಯಕ್ತಪಡಿಸಿ ತಹಸೀಲ್ದಾರ ಅವರಿಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.
ಸ್ಪಷ್ಠನೆ ಪಡೆಯಲು ಸೂಚಿಸಿ ಎಸಿ:
ಗ್ರಾಮಸ್ಥರ ಆರೋಪದ ಕುರಿತು ಸ್ಥಳದಲ್ಲೇ ಇದ್ದ ಚುನಾವಣಾಧಿಕಾರಿಯನ್ನು ಉಪವಿಭಾಗಾಧಿಕಾರಿ ವಿಚಾರಿಸಿದರು. ಸಮರ್ಪಕ ಉತ್ತರ ನೀಡಲು ಚುನಾವಣಾಧಿಕಾರಿ ತಡಬಡಿಸಿದರು. ತಕ್ಷಣ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅಲ್ಲಿರುವ ಚುನಾವಣಾ ತಜ್ಞರೊಬ್ಬರನ್ನು ಕಂಡು ಈ ಬಗ್ಗೆ ಸ್ಪಷ್ಟನೆ ಪಡೆದುಕೊಂಡು ಮುಂದುವರೆಯುವAತೆ ಉಪವಿಭಾಗಾಧಿಕಾರಿಯವರು ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಢವಳಗಿ ಗ್ರಾಪಂ ವ್ಯಾಪ್ತಿಯ ವಿನೋದ ಕೊಣ್ಣೂರ, ವಿಜಯಕುಮಾರ ಪಾಟೀಲ, ಕಾಶಿರಾಯ ಚಲವಾದಿ, ಬಸವರಾಜ ಯರಿಕ್ಯಾಳ, ಶರಣಪ್ಪ ಗುಡಿಮನಿ, ನಾಗೇಂದ್ರ ಹಳ್ಳೂರ, ಶಿವಾನಂದ ಸುರಪುರ, ಬಸವರಾಜ ಬ್ಯಾಲ್ಯಾಳ, ರಾಜಶೇಖರ ಪೂಜಾರ, ಮಹಿಬೂಬ ಬಾಗವಾನ, ಬಸನಗೌಡ ಪಾಟೀಲ, ಬಸವರಾಜ ಬಿರಾದಾರ, ಶಂಕರ ಬಿರಗೊಂಡ, ಮಡಿವಾಳಪ್ಪ ಬಾಗೇವಾಡಿ, ಚಂದ್ರಕಾAತ ಪಾಟೀಲ, ಪ್ರಕಾಶ ದಡ್ಡೇನವರ, ರಾಹುಲ್ ಚಲವಾದಿ, ಪಾವಡೆಪ್ಪ ಬಿರಗೊಂಡ, ಸುಭಾಷ ಮೇಲಿನಮನಿ, ಸೋಮಶೇಖರ ಮೇಟಿ ಗುಡಿಹಾಳ ಇದ್ದರು.
Be the first to comment