ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಡಿ.14:
ರಾಜ್ಯ ಸಾರಿಗೆ ಸಚಿವರು ಸಾರಿಗೆ ಇಲಾಖೆ ಸಿಬ್ಬಂದಿಗಳ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗಳು ಪಟಾಕಿ ಸಿಡಿಸಿ ಗೂಲಾಲ ಎರಚುವ ಮೂಲಕ ಸಂಭ್ರಮಾರಚಣೆ ಆಚರಿಸಿದರು.
ಈ ಕುರಿತು ಮಾತನಾಡಿದ ಸಾರಿಗೆ ಸಿಬ್ಬಂದಿ ಬಿ.ಎಸ್.ಕರಬಾವಿ, ರಾಜ್ಯ ಜನತೆ ಸೇವೆಯಲ್ಲಿರುವ ಸಾರಿಗೆ ಸಿಬ್ಬಂದಿಗಳಿಗೆ ಸರಕಾರದಿಂದ ಹೆಚ್ಚಿನ ಸೌಲಭ್ಯಗಳು ದೊರಕಿಸಬೇಕೆಂದು ರಾಜ್ಯ ಮಟ್ಟದ ಸಾರಿಗೆ ಸಿಬ್ಬಂದಿ ಸಂಘ ಹಾಗೂ ವಿವಿಧ ಸಂಘಟನೆಗಳಿಂದ 10 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಅವರು 9 ಬೇಡಿಕೆಗಳಿಗೆ ಸ್ಪಂಧಿಸಿದ್ದು ಸಂತಸವಾಗಿದೆ. ಸಾರಿಗೆ ಸಿಬ್ಬಂದಿಗಳಿಗೆ ಇಂತಹ ಬೇಡಿಕೆಗಳು ಯಾವುದೊ ಕಾಲದಲ್ಲಿ ಈಡೇರಬೇಕಿತ್ತು. ಅದನ್ನು ಇಂದಿನ ಸರಕಾರ ಈಡೇರಿಸಿದ್ದು ಅಭಿನಂದೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ವಾಯ್.ಬಿ.ಚಲವಾದಿ, ಹಣಮಂತ ಚಲವಾದಿ, ಆನಂದಯ್ಯ ಹಿರೇಮಠ, ವ್ಹಿ.ಎಸ್.ಹೊಳಿ, ಆರ್.ಎಂ.ಮುದ್ದೇಬಿಹಾಳ, ಎ.ವ್ಹಿ.ನಾಯ್ಕೋಡಿ, ಪಿ.ಓ.ಗೋಲಂದಾಜ, ಬಿ.ಬಿ.ಬಿರಾದಾರ, ಸಿ.ಐ.ಪತ್ತೇಪೂರ, ಎಂ.ಜಿ.ಬಿರಾದಾರ ಸೇರಿದಂತೆ ಇತರರಿದ್ದರು.
Be the first to comment