ಇಲಾಖೆಯ ನೌಕರರು ಮುಷ್ಕರ ನಡೆಸಿ, ತಪ್ಪು ಹೆಜ್ಜೆಯನ್ನು ಇಟ್ಟು ದಯವಿಟ್ಟು ಕಾಲ ಮೇಲೆ ಚಪ್ಪಡಿ ಕಲ್ಲು ಎಳೆದು ಕೊಳ್ಳಬೇಡಿ ಎಂದು ಕಾರ್ಮಿಕ ಮತ್ತ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಮನವಿ ಮಾಡಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಕೊವಿಡ್ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸರ್ಕಾರಿ ನೌಕರ ರನ್ನಾಗಿ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಕಳೆದ 5 ತಿಂಗಳಿನಿಂದ ಬಸ್ಸಿನ ಓಡಾಟವಿಲ್ಲ. ಪ್ರತಿ ತಿಂಗಳು 321 ಕೋಟಿ ಪಗಾರನ್ನು ನೀಡುತ್ತೇವೆ. ಸರ್ಕಾರದಿಂದ 955 ಕೋಟಿ ರೂ.ಹಣ ಬಿಡುಗಡೆ ಮಾಡಿ ವೇತನ ನೀಡಲಾಗಿದೆ ಎಂದರು.
ಯಾವ ಕಾಲಕ್ಕೂ ಸಾರಿಗೆ ನೌಕರರನ್ನು ಖಾಯಂ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇದನ್ನು ಈಗಾಗಲೇ ಮುಖ್ಯ ಮಂತ್ರಿಗಳು, ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದ ಅವರು, ಕೋಡಿಹಳ್ಳಿ ಚಂದ್ರಶೇಖರ ಯಾರದ್ದೋ ಮಕ್ಕಳನ್ನು ರಸ್ತೆಯ ಮೇಲೆ ಹಾಕಿ, ಅವರಿಗೆ ಪ್ರಚೋದನೆ ನೀಡಿ, ಕೆಎಸ್.ಆರ್.ಟಿಸಿ. ನೌಕರರಿಂದ ಛೀಮಾರಿಗೆ ಒಳಗಾಗಿದ್ದು ನೋಡಿದ್ದೇವೆ. ಅವರು ರೈತ ಮುಖಂಡರಾಗಿ ರೈತರಿಗಾಗಿ ಮಾಡಿದ್ದು ನೋಡಿದ್ದೇವೆ. ಆದರೆ ಸಾರಿಗೆ ಇಲಾಖೆ ನೌಕರರನ್ನು ರಸ್ತೆಯ ಮೇಲೆ ಹಾಕಿ ಚಂದಾ ನೋಡಬೇಡಿ ಎಂದು ಕಿಡಿಕಾರಿದರು.
ಕೋಲಾರದ ಮೊಬೈಲ್ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 3 ತಿಂಗಳಿನಿಂದ ವೇತನ ಆಗಿಲ್ಲ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ. ಅವರಿಗೆ ವೇತನ ಕೊಡಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಏಕಾಏಕಿ ದಾಳಿ ನಡೆಸಿ, ಕಂಪನಿಗೆ 431 ಕೋಟಿ ರೂ. ಹಾನಿಯಾಗಿದೆ. ಇದರಿಂದ ಕಾನೂನು ಕೈಗೆ ಎತ್ತಿಕೊಳ್ಳುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಬೆಂಬ ಲಿಸುವುದಿಲ್ಲ ಮಾತನಾಡಿದ
Be the first to comment