ಜಿಲ್ಲಾ ಸುದ್ದಿ
ಕುಮಟಾ: ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ಮರಳುಗಾರಿಕೆಯಿಂದ ಮೀನುಗಾರರಿಗೆ ತೊಂದರೆ ಉಂಟಾಗುತ್ತಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಸ್ಥಳಿಯ ಮೀನುಗಾರು ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ಇಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ನಾಡದೋಣಿಯಲ್ಲಿ ಮರಳು ತುಂಬಿ ಸಾಗಾಟ ಮಾಡಲಾಗುತ್ತಿದೆ. ಇದರಿಂದ ಮೀನುಗಳ ಸಂತತಿ ನಾಶವಾಗಲಿದ್ದು, ಹೇರಳವಾಗಿ ಸಿಗುವ ಚಿಪ್ಪಿಕಲ್ಲು ಅವನತಿಯ ಹಂತದಲ್ಲಿದೆ.
ಉಸುಕು ತುಂಬಲು ಬರುವ ವಾಹನವು ಎಲ್ಲಂದರಲ್ಲಿ ನಿಲ್ಲುವುದರಿಂದ ರಸ್ತೆಯಲ್ಲಿ ಸಂಚರಿಸಲು ಕಷ್ಟ ಪಡುವ ಪರಿಸ್ಥಿತಿ ಇಲ್ಲಿಯ ಜನರದ್ದಾಗಿದೆ. ಮೀನುಗಾರಿಕೆಯನ್ನೇ ಅವಲಂಬಿಸಿರುವ ನಮಗೆ ಉಸುಕು ತೆಗೆಯುವದರಿಂದ ತೊಂದರೆ ಉಂಟಾಗುತ್ತಿದ್ದು, ತಕ್ಷಣವೇ ನಿಲ್ಲಿಸುವಂತೆ ಕಂದಾಯ ಇಲಾಖೆ ಮತ್ತು ಪಂಚಾಯತ ಪಿಡಿಒ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Be the first to comment