ಕಾಲು ಜಾರಿ 40 ಅಡಿ ಬಾವಿಯೊಳಗೆ ಬಿದ್ದ ವೃದ್ಧೆ; ಅಗ್ನಿಶಾಮಕ ಭಟ್ಕಳ ಠಾಣಾಧಿಕಾರಿ ರಮೇಶ್ ಶೆಟ್ಟಿ ನೇತೃತ್ವದಲ್ಲಿ , ಸಿಬ್ಬಂದಿಗಳಿಂದ ವ್ರದ್ದೆ ರಕ್ಷಣೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಭಟ್ಕಳ: ಬಾಯಿಯಿಂದ ನೀರು ಸೇದುತ್ತಿರುವಾಗ ಆಕಸ್ಮಿಕ ಕಾಲು ಜಾರಿ 40 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಸೊಡಿಗದ್ದೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಸೊಡಿಗದ್ದೆಯ ನಿವಾಸಿ ನಾಗಮ್ಮ ಮನೆಯ ಬಾವಿ ತೆರೆದ ಬಾವಿಯಾಗಿದ್ದು, ಇದರಿಂದ ನೀರು ಸೇದುವಾಗ ಕಾಲು ಜಾರಿ ಬಾವಿಯೊಳಗೆ ಬಿದ್ದಿದ್ದಾಳೆ. ವಿಷಯ ತಿಳಿದ ಮನೆಯವರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ವೃದ್ಧೆಯನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದರು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಎಸ್ ರಮೇಶ, ಮನೋಜ ಬಾಡಕರ್,ರಾಜೇಶ ನಾಯ್ಕ ಕುಮಾರ ನಾಯ್ಕ,ಪುರುಷೋತ್ತಮ ನಾಯ್ಕ ಅಕ್ಷಯ ಹಿರೇಮಠ, ಸುಧಾಕರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*