ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಬೆಟ್ಟದ ಇತಿಹಾಸ ಪ್ರಸಿದ್ಧ ಮನಗೊಂಡನಹಳ್ಳಿ ಗ್ರಾಮದ ಶ್ರೀ ಭೀಮೇಶ್ವರ ಸ್ವಾಮಿಗೆ ಕಾರ್ತಿಕ ಮಾಸದ ಮೂರನೇ ಸೋಮವಾರದ ಅಂಗವಾಗಿ ವಿಶೇಷ ಪೂಜೆ ಮತ್ತು ಭಜನೆ ಕೈಂಕರ್ಯ ಜರುಗಿದವು. ಭಕ್ತಾಧಿಗಳು ಬೆಟ್ಟವನ್ನು ಹತ್ತುವುದರ ಮೂಲಕ ಭೀಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯದಲ್ಲಿ ಪಾಲ್ಗೋಂಡು ಭಜನೆಯಲ್ಲಿ ಭೀಮೇಶ್ವರನ ಜಪವನ್ನು ಪಠಿಸಿದರು.
ಮನಗೊಂಡನಹಳ್ಳಿ ಗ್ರಾಮದ ಪೂಜಾ ಸೇವಾಕರ್ತರಾದ ಮಮತಾಶಿವಾಜಿಗೌಡ ನೇತೃತ್ವದಲ್ಲಿ ಪೂಜೆ ಮತ್ತು ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಶ್ರೀ ಭೀಮೇಶ್ವರನಿಗೆ ವಿಶೇಷ ಅಲಂಕಾರ ಭಕ್ತಾಧಿಗಳು ಗಮನಸೆಳೆಯಿತು. ಈ ವೇಳೆಯಲ್ಲಿ ಮುಖಂಡರಾದ ಅಮೃತಪ್ಪ, ಸುಬ್ಬೇಗೌಡ, ವೆಂಕಟೇಶಮೂರ್ತಿ, ಕೆಂಪೇಗೌಡ, ಮನಗೊಂಡನಹಳ್ಳಿ ಗ್ರಾಮದ ಭಕ್ತಾಧಿಗಳು, ಕೊಯಿರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಭಕ್ತಾಧಿಗಳು, ಪ್ರಧಾನ ಅರ್ಚಕ ದೇವ್ರಾಜ್ ದೀಕ್ಷಿತ್, ಸಹ ಅರ್ಚಕ ಶರತ್ ದೀಕ್ಷಿತ ಮತ್ತಿತರರು ಇದ್ದರು.
Be the first to comment