ಚಿನ್ನದಂಗಡಿ ಸುಲಿಗೆ ಪ್ರಕರಣದ ಮೂರನೇ ಆರೋಪಿ ಬಂದಿಸಿದ ಪೋಲೀಸರು

ವರದಿ ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿಗಳು 

ಶಿರಸಿ

ಹಲವು ದಿನಗಳ ಹಿಂದೆ ರತ್ನದೀಪ ಎಂಬ ಜ್ಯುವೆಲರಿ ವರ್ಕ್ಸ ಅಂಗಡಿ ಕಳ್ಳತನ ಆದ ಬಗ್ಗೆ ಪ್ರಕರಣ ದಾಖಲಾಗಿದ್ದು, ಎರಡು ಜನರನ್ನು ಬಂದಿಸುವಲ್ಲಿ ಶಿರಸಿ ಪೋಲೀಸರು ಯಶಶ್ವಿಯಾಗಿದ್ದು, ಇಂದು ಇನ್ನೋರ್ವ ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಮೈನುದ್ದಿನ್ ಮೈನು ಮಹ್ಮದ್ ಇಸಾಕ (24) ಬಂದಿತ ಆರೋಪಿಯಾಗಿದ್ದು ಮೂಲತಃ ಬೆಳಗಾವಿ ಮೂಲದವನೆಂದು ತಿಳಿದುಬಂದಿದೆ.

CHETAN KENDULI

 ಬಂದಿತರಿಂದ ಅಂದಾಜು 53,130 ರೂಪಾಯಿ ಮೌಲ್ಯದ 11.50 ಗ್ರಾಂ ಚೈನ್,49,000 ಸಾವಿರ ಮೌಲ್ಯದ 22.28 ಗ್ರಾಂ ಚಿನ್ನ ಒಟ್ಟು 1.02.672 /- ರೂಪಾಯಿ ಮಾಲ್ಯದ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ ಮಾರುತಿ ಸುಝುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣದಲ್ಲಿ ರವಿ ಡಿ. ನಾಯ್ಡ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ರಾಮಚಂದ್ರ ನಾಯಕ ಸಿ.ಪಿ.ಐ ಹಾಗೂ ತನಿಖಾ ತಂಡದ ಸದಸ್ಯರುಗಳಾದ ರಾಜಕುಮಾರ ಉಕ್ಕ ಪಿ.ಎಸ್.ಐ, ಶಿರಸಿ ನಗರ ಠಾಣೆ – ಮೋಹಿನಿ ಶೆಟ್ಟಿ ಮ.ಪಿ.ಎಸ್.ಐ ಶಿರಸಿ ನಗರ ಠಾಣೆ . ಹಾಗೂ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಮಹ್ಮದ ಶಫಿ, ಚೇತನಕುಮಾರ, ಎಚ್. ರಾಮಯ್ಯ, ಪ್ರಶಾಂತ ಪಾವಸ್ಕರ, ಗಣಪತಿ ಪಟಗಾರ, ಸದ್ದಾಂ ಹುಸೇನ, ಮಂಗಳಮೂರ್ತಿ ಶಿರಹಟ್ಟಿ, ಫಕೀರ ವಣ್ಣೂರ, ಸುಭಾಷ ನಜೀರ, ಅಶೋಕ ಚಾಲಕರುಗಳಾದ ಪಾಂಡು ನಾಗೋಜಿ, ಶಿವಪ್ಪ ಇವರುಗಳು ಈ ಕಾರ್ಯಾಚರಣೆಯಲ್ಲಿದ್ದು, ಈ ತಂಡವನ್ನು ಶಿವಪ್ರಕಾಶ ದೇವರಾಜು ಪೊಲೀಸ ಅಧೀಕ್ಷಕರು ಪ್ರಶಂಶಿಸಿರುತ್ತಾರೆ.

Be the first to comment

Leave a Reply

Your email address will not be published.


*