ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೊರೊನಾ ಸೋಂಕು ಹರಡುವ ಮುನ್ನ ಸರ್ಕಾರದಿಂದ ಉಚಿತವಾಗಿ ಸಿಗುವ ಕೋವಿಡ್ ಲಸಿಕೆ ಪಡೆದುಕೊಂಡು ಕೊರೊನಾ ಆತಂಕ ಬಿಡಿ ಎಂದು ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಕೀರ್ತಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪುರಸಭೆ ವಾರ್ಡ್ 1 & 21 ರ ಡಿವಿಎಂ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ವಾರ್ಡ್ ಜನರಿಗೆ ಲಸಿಕೆ ಹಾಕುವ ಮೂಲಕ ಮಾತನಾಡಿದರು. ಸರ್ಕಾರ ಕೋವಿಡ್ ತಡೆಗಟ್ಟಲು ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಈಗಾಗಲೇ ಗ್ರಾಮೀಣ ಪ್ರದೇಶದ ಜನರಿಗೆ, ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಜನರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಲಸಿಕೆಯನ್ನು ಪಡೆದುಕೊಂಡ ನಂತರವು ಕೊರೋನಾ ಮುಂಜಾಗೃತಾ ಕ್ರಮ ಅನುಸರಿಸುವುದರಿಂದ ಕೋವಿಡ್ ಸಂಪೂರ್ಣ ತಡೆಗಟ್ಟಬಹುದು ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮಾತನಾಡಿ, ಈಗಾಗಲೇ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿ, ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗಿದೆ. ದೇವನಹಳ್ಳಿಯ ಲಯನ್ಸ್ ಸಂಸ್ಥೆಯಲ್ಲಿಯೂ ಸಹ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯದ ನಗರಿಕರು ಕೂಡಲೇ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಪುರಸಭಾ ಸದಸ್ಯ ಕೋಮಲ ನಟರಾಜ್, ವಿಶ್ವನಾಥಪುರ ಪಿಎಚ್ಎಸ್ಸಿ ಲ್ಯಾಬ್ ಟೆಕ್ನಿಷಿಯನ್ ಮಂಜುಳಾ, ಫಾರ್ಮ ಸಹಾಯಕಿ ದೀಪಿಕಾ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರಮ್ಯ, ಆಶಾ ಕಾರ್ಯಕರ್ತರು ಇದ್ದರು.
Be the first to comment