ಜಿಲ್ಲಾ ಸುದ್ದಿಗಳು
ಮುಂಡಗೋಡ
ತಾಲೂಕಾದ್ಯಂತ ಅರಣ್ಯವಾಸಿಗಳ ಸಮಸ್ಯೆಗಳನ್ನು ಸ್ಫಂದಿಸುವ ದಿಶೆಯಲ್ಲಿ ಸಪ್ಟೆಂಬರ್ ೧೩, ಸೋಮವಾರ ಮುಂಜಾನೆ ೧೦:೩೦ ಕ್ಕೆ ಮುಂಡಗೋಡ ತಾಲೂಕಿನ ಅರಣ್ಯಾಧಿಕಾರಿಗಳೊಂದಿಗೆ ‘ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಶಿವಾನಂದ ಜೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾದ್ಯಂತ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮತ್ತು ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಅರಣ್ಯವಾಸಿಗಳ ಸಮಸ್ಯೆಯನ್ನು ಸ್ಪಂದಿಸುವ ದಿಶೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ತಾಲೂಕಾ ಮಟ್ಟದ ‘ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಅನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಸಂಘಟಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಸದ್ರಿ ಅದಾಲತ್‌ಗೆ ಇಗಾಗಲೇ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಗಳ ಸಹಕಾರ ಕುರಿತು ಪತ್ರ ಬರೆಯಲಾಗಿದ್ದು, ಆಸಕ್ತ ಸಮಸ್ಯೆಗಳಿರುವ ಅರಣ್ಯವಾಸಿಗಳು ಅಂದು ಮುಂಜಾನೆ ೧೦:೩೦ ಕ್ಕೆ ಮುಂಡಗೋಡ ಅರಣ್ಯ ಕಛೇರಿ ಎದುರು ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment