ನಮ್ಮ ತಂದೆಯ ಸೇವೆಯನ್ನು ಮುಖ್ಯಮಂತ್ರಿ ಮತ್ತು ಸಚಿವರು ಮಾಡಲಿ….ಅವಾಗ್ ನೌಕರರ ಕಷ್ಟ ಏನು ಎಂಬುವುದು ಗೊತ್ತಾಗುತ್ತದೆ….!!! ಮುದ್ದೇಬಿಹಾಳದಲ್ಲಿ ವಿವಿಧ ಸಂಘಟನೆಗಳಿಂದ ಲೋಟ ತಟ್ಟೆ ಬಡೆಯುವ ಚಳವಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

“ಮುಖ್ಯಮಂತ್ರಿಗಳೆ ಸಾರಿಗೆ ನೌಕರರ ಸಮಸ್ಯೆ ತಿಳಿಯಬೇಕೆಂದರೇ ನೀವೆ ಬಸ್ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಿ. ಆವಾಗಾ ನಿಮಗೆ ತಮ್ಮ ತಂದೆಯ ನೋವು ತಿಳಿಯುತ್ತದೆ. ತಮ್ಮ ತಂದೆಯ 14 ಸಾವಿರ ವೇತನದಲ್ಲಿ ತಮ್ಮ ಮನೆ ಬಾಡಿಗೆ, ಕಾಲೇಜಿನ ಫೀ ಎಲ್ಲವನ್ನೂ ನೋಡಿಕೊಳ್ಳಲು ಸಾದ್ಯವಿಲ್ಲ. ದಯವಿಟ್ಟು 6ನೇ ವೇತನ ಜಾರಿ ಮಾಡಿ.”

-ಶೃತಿ, ನೌಕರರ ಪುತ್ರಿ, ಪದವಿಧವರೆ ವಿದ್ಯಾರ್ಥಿ, ಮುದ್ದೇಬಿಹಾಳ

“ಇತಿಹಾಸದಲ್ಲಿಯೇ ನೌಕರರ ಮುಷ್ಕರ 7 ದಿನಗಳ ಮಟ್ಟಿಗೆ ಆಗಿದಿಲ್ಲಾ….ಅಲ್ಲದೇ ನೌಕರಸ್ಥರ ಕುಟುಂಬವು ಚಳುವಳಿಯಲ್ಲಿ ಭಾಗವಹಿಸಿದಿಲ್ಲಾ. ಇದನ್ನು ನೋಡಿದರೆ ರಾಜ್ಯ ಸರಕಾರದ ಉದ್ಘಟತನ ಎದ್ದುಕಾಣುತ್ತದೆ. ರಾಜಕೀಯ ಮಾಡಬೇಡಿ, ಸಾವಿರಾರು ವರ್ಷ ಸಾರಿಗೆ ಸಂಸ್ಥೆಯನ್ನು ಬೃಹತ್ತವಾಗಿ ಬೆಳೆಸಿದ ಸಾರಿಗೆ ಸಿಬ್ಬಂದಿಗಳ ಕೊರತೆಯನ್ನು ನಿಗಿಸಿ ನಿಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳಿರಿ.”

CHETAN KENDULI

    ಸಾರಿಗೆ ನೌಕರರ ಮುಷ್ಕರ ಕಳೆದ 7 ದಿನಗಳಿಂದ ನಡೆಯುತ್ತಿದ್ದರೂ ರಾಜ್ಯ ಸರಕಾರ ನೌಕರರನ್ನು ಕರೆದು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡದೇ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವುದನ್ನು ಖಂಡಿಸಿ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾ ಮಂಡಳವತಿಯಿಂದ ಸೋಮವಾರ ಹಮ್ಮಿಕೊಳ್ಳಲಾದ ಚಳುವಳಿಯಲ್ಲಿ ಕೇಳಿಬಂದ ಮಾತುಗಳು.



ಇದಕ್ಕೂ ಮೊದಲು ಬಸ್ ಸಂಚಾರ ನಡೆಸಲು ಸಾರಿಗೆ ನೌಕರರಿಗೆ ಸಾರಿಗೆ ಘಟಕದ ಅಧಿಕಾರಿಗಳಿಂದ ದಬ್ಬಾಳಿಕೆ ನಡೆಸಿದ ಹಿನ್ನೆಲೆಯಲ್ಲಿ ನೌಕರರ ಕುಟುಂಸ್ಥರು ಬಸ್ ನಿಲ್ದಾಣಕ್ಕೆ ಆಗಮಿಸಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಳ್ಳಲಾದ ಲೋಟ ತಟ್ಟೆ ಬಡೆಯುವ ಚಳುವಳಿಯಲ್ಲಿ ಭಾಗವಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ತಹಸೀಲ್ದಾರ ಕಛೇರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸಾರಿಗೆ ಸಂಸ್ಥೆಯು ಬೃಹತ್ ಪ್ರಮಾಣದಲ್ಲಿ ಬೆಳೆಯಬೇಕು ಎಂದರೆ ದಿ.ದೇವರಾಜ ಅರಸರೇ ಕಾರಣ.



ಅವರು ಅಂದೇ ಖಾಸಗಿಕರಣಕ್ಕೆ ಮುಂದಾಗಿದ್ದರೆ ಇಂದು ಇಲಾಖೆಯಲ್ಲಿ 1 ಕೋಟಿಗೂ ಹೆಚ್ಚು ಕುಟುಂಬಸ್ಥರು ಸೇವೆ ಸಲ್ಲಿಸುತ್ತಿರಲಿಲ್ಲಾ. ಈಗಾ ನೌಕರರ ಪ್ರತಿಭಟನೆ ಹಿನ್ನೆಲೆ ಖಾಸಗಿಕರಣಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ ಹಕ್ಕುಚ್ಯುತಿ ಮಾಡುವ ಕೆಲಸ ಮಾಡುತ್ತಿದೆ. ಇನ್ನೂ ಇದೇ ಸರಕಾರದ ಸಚಿವರಾಗಿರುವವರ ಹತ್ತಿರ ಸಾಕಷ್ಟು ಬಸ್‌ಗಳಿದ್ದು ಅವುಗಳನ್ನು ನಿಲ್ದಾಣದಲ್ಲಿಯೇ ನಿಲುಗಡೆ ಮಾಡಿಸುವ ಕೆಲಸ ಮಾಡುತ್ತಿದೆ. ಕೂಡಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.



ಇದೇ ವೇಳೆಯಲ್ಲಿ ಜೆಡಿಎಸ್ ಮಹಿಳಾ ರಾಜ್ಯ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ, ಸಮಾಜ ಸೇವಕಿ ಸಂಗಿತಾ ನಾಡಗೌಡ, ಡಿಎಸ್‌ಎಸ್ ಮುಖಂಡರ ಹರೀಶ ನಾಟೀಕರ, ಸಮಾಜ ಸೇವಕ ಕಾಮರಾಜ ಬಿರಾದಾರ, ನಿವೃತ್ತ ಸಾರಿಗೆ ನೌಕರ ಅಬ್ದುಲ್‌ರೇಹಮಾನ ಬಿದರಕುಂದಿ ಮಾತನಾಡಿದರು.
ಬಸ್ ನಿಲ್ದಾಣದಲ್ಲಿಯೇ ಉಪಹಾರ ಸೇವಿಸಿದ ನೌಕರರ ಕುಟುಂಬ:
ಸೋಮವಾರ ಹಮ್ಮಿಕೊಳ್ಳಲಾದ ಚಳುವಳಿಯಲ್ಲಿ ಭಾಗವಹಿಸಲು ಸಾರಿಗೆ ಇಲಾಖೆ ನೌಕರರ ಕುಟುಂಬಸ್ಥರು ಪುಟ್ಟ ಮಕ್ಕಳೊಂದಿಗೆ ಬೆಳಿಗ್ಗೆಯೇ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಚಳುವಳಿಯ ನಂತರ ಮತ್ತೆ ಬಸ್ ನಿಲ್ದಾಣಕ್ಕೆ ತೆರಲಿ ಉಪಹಾರ ಸೇವಿಸಿದರು. ಅಲ್ಲದೇ ಚಳುವಳಿಯಲ್ಲಿ ಸಣ್ಣ ಮಕ್ಕಳೂ ಭಾಗವಹಿಸಿದ್ದ ಎಲ್ಲರ ಕರಳು ಕಿವುಚಿದಂತಾಯಿತು.



ಸೇವೆಗೆ ಹಾಜರಾದ ನೌಕರರಿಗೆ ಹಾರ ಹಾಕಿದ ಪ್ರತಿಭಟನಾಕಾರರು:
ಮುದ್ದೇಬಿಹಾಳ ಸಾರಿಗೆ ಘಟಕದಿಂದ ಸೋಮವಾರ ಬಸ್ ಸೇವೆಯನ್ನು ಒದಗಿಸಿದ್ದ ಬಸ್ ಚಾಲಕನ ಹಾಗೂ ನಿರ್ವಾಹಕರಿಗೆ ಚಳುವಳಿಯ ನಂತರ ಪ್ರತಿಭಟನಾಕಾರರು ಹೂವಿನ ಹಾರವನ್ನು ಹಾಕುವ ಮೂಲಕ ನೌಕರರಿಗೆ ಅಭಿನಂದನೆ ಸಲ್ಲಿಸಿದ್ದು ಕೆಲ ನೌಕರರಿಗೆ ಪಶ್ಚಾತಾಪವಾಗುವಂತಾಯಿತು.



ಪೋಲಿಸ್ ಬಿಗಿ ಭದ್ರತೆ:
ಸೋಮವಾರ ವಿವಿಧ ಸಂಘಟನೆಗಳಿಂದ ಹಮ್ಮಿಕೊಳ್ಳಲಾದ ಚಳುವಳಿಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸ್ಥಳೀಯ ಆರಕ್ಷಕರ ಉಪ ನಿರೀಕ್ಷಕ ಮಡಿವಾಳಪ್ಪ ಬಿರಾದಾರ ಬಿಗಿ ಭದ್ರತೆ ಒದಗಿಸಿದರು.



ಚಳುವಳಿಯಲ್ಲಿ ಪುರಸಭೆ ಸದಸ್ಯರಾದ ವೀರೇಶ ಹಡಲಗೇರಿ, ಮೆಹಬೂಬ ಗೊಳಸಂಗಿ, ಶಿವು ಶಿವಪೂರ, ಮುತ್ತು ನಾಯಕಮಕ್ಕಳ, ಬಾಬಾ ಪಟೇಲ, ಸದ್ದಾಂ ಕುಂಟೋಜಿ, ರಫೀಕ ಶಿರೋಳ, ಅಬೀಬ ನಾಲತವಾಡ ಪುಟ್ಟ ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಸಾರಿಗೆ ನೌಕರರ ಕುಟುಂಬಸ್ಥರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*