ರಾಜ್ಯ ಸುದ್ದಿಗಳು
ಬೆಂಗಳೂರು
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರ ಸ್ನೇಹಿತರ ಮೇಲೆ ಸಿಐಡಿ ದಾಳಿ ನಡೆಸಿದ್ದು, ಜಕ್ಕೂರಿನ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹುಸ್ಕೂರು ಆನಂದನ ಮನೆ ಮೇಲೆ ನಿನ್ನೆ ಸಿಐಡಿ ದಾಳಿ ನಡೆಸಿದೆ.ಜಕ್ಕೂರಿನ ಶಂಭುಲಿಂಗ ರಾಯಚೂರು ಮೂಲದ ಎಎಸ್ಐ ಮಗನಾಗಿದ್ಧಾನೆ. ಬೆಂಗಳೂರಿಗೆ ಬಂದು ಕೇವಲ 10 ವರ್ಷವಾಗಿದೆ. ಆದರೆ ಶಂಭುಲಿಂಗ ಜಕ್ಕೂರಿನಲ್ಲಿರೋ 6 ಕೋಟಿಯ ಫ್ಲ್ಯಾಟ್ಯಿದೆ. ಅಷ್ಟೇ ಅಲ್ಲ15 ಕೋಟಿಗೂ ಅಧಿಕ ಲ್ಯಾಂಡ್ನ್ನು ಹೊಂದಿದ್ದಾನೆ. ಎಡಿಜಿಪಿ ಅಮೃತ್ ಪೌಲ್ ಕೃಪಾಕಟಾಕ್ಷದಿಂದ ಕೋಟಿ ಕೋಟಿ ರೂಪಾಯಿ ಬೇನಾಮಿ ಯಾಗಿದ್ದ ಎಂಬ ಆರೋಪವಿದೆ.
ಶಂಭುಲಿಂಗ ಕೊಡಿಗೆಹಳ್ಳಿಯಲ್ಲಿ ಕೃಷಿ ಉತ್ಪನ್ನಗಳ ಅಂಗಡಿ ಇಟ್ಟುಕೊಂಡಿದ್ದಾನೆ. ಆದ್ರೆ, ಇಷ್ಟೆಲ್ಲಾ ಹಣ ಎಲ್ಲಿಂದ ಬಂತು ಸಾಮಾನ್ಯ ಎಎಸ್ ಐ ಮಗನಿಗೆ ಎಂಬ ಅನುಮಾನ ಮೂಡುತ್ತದೆ. ಪಿಎಸ್ ಐ ಅಕ್ರಮದಲ್ಲೂ ಶಂಭುಲಿಂಗ ಪಾಲುದಾರಿಕೆ ಹೊಂದಿದ್ದಾನಾ..? ಇದೀಗ ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಕೈಗೊಂಡಿದ್ಧಾರೆ. ಇನ್ನು ಹುಸ್ಕೂರು ಆನಂದನೂ ಕೂಡ ಪೌಲ್ ಜೊತೆ ಸೇರಿ ಕೋಟಿ ಕೋಟಿ ಕೊಳ್ಳೆಹೊಡೆದಿದ್ದಾನಂತೆ. ಹುಸ್ಕೂರು,ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹುಸ್ಕೂರು ಆನಂದ 30 ಕೋಟಿಯಷ್ಟು ಪ್ರಾಪರ್ಟಿ ಮಾಡಿದ್ದಾನಂತೆ.
Be the first to comment