ಜಿಲ್ಲಾ ಸುದ್ದಿಗಳು
ಭಟ್ಕಳ: 16 ವರ್ಷದ ಅಪ್ರಾಪ್ತ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಯುವತಿಯ ತಾಯಿ ಶನಿವಾರ ಪ್ರಕರಣ ದಾಖಲಿಸಿದ್ದಾಳೆ.
ಆರೋಪಿಯನ್ನು ನಿತೀನ್ ಅಣ್ಣಪ್ಪ ನಾಯ್ಕ ಮುರುಡೇಶ್ವರ ಹಿರೇದೋಮಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಅದೇ ಊರಿನ 16 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಯುವತಿಯನ್ನು ಮದುವೆಯಾಗುದಾಗಿ ಪುಸಲಾಯಿಸಿ ಸೆಪ್ಟೆಂಬರ್ 1 ರಾತ್ರಿ 11.45 ರ ಸುಮಾರಿಗೆ ಕರೆ ಮಾಡಿ ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾನೆ.
ಮಾವಳ್ಳಿ-2 ರ ಕನ್ನಡ ಶಾಲೆ ಸಮೀಪದ ಹಳೆಯ ಮನೆಯ ಬಳಿ ಬರುವಂತೆ ಹೇಳಿ.ಲ, ನಂತರ ಅಲ್ಲಿಗೆ ಬಂದ ಯುವತಿಗೆ ಏನನ್ನು ಮಾತನಾಡಲು ಕೊಡೆದ ಮನೆಯ ಒಳಗೆ ಕರೆದುಕೊಂಡು ಹೋಗಿ ಹೆದರಿಸಿ ಬಲವಂತವಾಗಿ ಆಕೆಯ ಮೇಲೆ 2 ಬಾರಿ ಲೈಂಗಿಕ ಸಂಪರ್ಕ ಎಸೆದು ನಿನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.ಅಲ್ಲಿಯವರೆಗೆ ಈ ವಿಷಯವನ್ನು ಯಾರಿಗೂ ಹೇಳ ಬೇಡ , ಹೇಳಿದರೆ ನಿನ್ನನ್ನು ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment