ಶತಮಾನದ ಶಾಲೆಯಲ್ಲಿ “ಶಿಕ್ಷಕರ ದಿನಾಚರಣೆ” ಅರುಂಧತಿ ಸೇವಾ ಸಂಸ್ಥೆ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾರ್ಯಕ್ರಮ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಶತಮಾನದ ಶಾಲೆಯಲ್ಲಿ ಸೆ.೫ ಶಿಕ್ಷಕರ ದಿನಾಚರಣೆ ಅಂಗವಾಗಿ ಅರುಂಧತಿ ಸೇವಾ ಸಂಸ್ಥೆ ಮತ್ತು ಶಾಲಾಡಳಿತ ವತಿಯಿಂದ sಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿ ಹಾಗೂ ಶಿಕ್ಷಕ ಸರ್ವೆಪಲ್ಲಿ ಡಾ.ರಾಧಕೃಷ್ಣನ್ ಅವರಿಗೆ ಗೌರವ ಸಮರ್ಪಿಸಿ ಮತ್ತು ಹಿರಿಯ ಶಿಕ್ಷಕ ಶ್ರೀರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಆನಂದ್‌ಕುಮಾರ್ ಮಾತನಾಡಿ, ಒಬ್ಬ ಶಿಕ್ಷಕ ಇಡೀ ವಿದ್ಯಾರ್ಥಿ ವೃಂದವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಾಕಷ್ಟು ಶ್ರಮವಹಿಸುತ್ತಾರೆ. ಅವರನ್ನು ಗುರ್ತಿಸಿ, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗುರು ಇಲ್ಲದ ವಿದ್ಯೆ ಎಂದಿಗೂ ಯಶಸ್ಸು ಕಾಣದು. ಪ್ರತಿ ಜನಪ್ರತಿನಿಧಿಗಳು, ಸರಕಾರಿ ಹುದ್ದೆಯಲ್ಲಿರುವವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರೆ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಎಂದಿಗೂ ಹೋಗುವುದಿಲ್ಲ ಆ ಪ್ರಮೆಯವೂ ಬರುವುದಿಲ್ಲ ಎಂದು ಹೇಳಿದರು.

CHETAN KENDULO

ನಿವೃತ್ತ ಶಿಕ್ಷಕ ಶ್ರೀರಾಮಯ್ಯ ಮಾತನಾಡಿ, ನಿವೃತ್ತಿಯಾಗಿ ೧೫ ವರ್ಷ ಕಳೆದರೂ ಸಹ ನನ್ನ ಆಸರೆಯಲ್ಲಿ ಬೆಳೆದ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸಿಕೊಳ್ಳುತ್ತಿರುವುದು ನಮಗೆ ಸಂತಸ ತಂದಿದೆ. ಅಂದಿನ ವಿದ್ಯಾರ್ಥೀಗಳು ಈಗಿನ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವುದು ಶ್ಲಾಘನೀಯ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಕೊರಚರ ಪಾಳ್ಯ ಶಾಲೆಯ ಹಳೆಯ ವಿದ್ಯಾರ್ಥಿಗಳೇ ಮಾದರಿಯಾಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂಜರಿಯುವ ಪೋಷಕರಿಗೆ ಒಂದು ಕಿವಿ ಮಾತು ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದೇ ಬರುತ್ತಾರೆ ಹಾಗೂ ಜೀವನದ ಪಾಠ ಇಲ್ಲಿಂದಲೇ ಕಲಿಯುತ್ತಾರೆ. ಆದರೆ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ತಮ್ಮ ಮಕ್ಕಳ ಜೀವನದಲ್ಲಿ ಒಂದು ಸಣ್ಣ ಸಮಸ್ಯೆಯನ್ನು ಸಹ ಪರಿಹರಿಸಿಕೊಳ್ಳಲು ಆಗದ ಪರಿಸ್ಥಿತಿಗೆ ಪೋಷಕರು ಮಾಡುತ್ತಾರೆ. ಹೀಗೆ ಹಾಗಬಾರದು ಸರಕಾರಿ ಶಾಲೆಯಲ್ಲಿ ಎಲ್ಲಾ ತರಹದ ಶಿಕ್ಷಣವನ್ನು ಮಕ್ಕಳಿಗೆ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಆರ್‌ಎಚ್‌ಎಂ ಗಂಗಾಧರ್(ವೆಂಕಟೇಶ್) ಮಾತನಾಡಿ, ನಾವು ಓದಿದ ಶಾಲೆಯಲ್ಲಿ ನಮ್ಮ ಅಳಿಲು ಸೇವೆ ಮಾಡುತ್ತಿರುವುದು ನಮಗೆ ಲಭಿಸಿದ ಭಾಗ್ಯವಾಗಿದೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಶಾಲೆಗೆ ಏನೇ ಕುಂದುಕೊರತೆ ಇದ್ದರೂ ಹೇಳಿಕೊಂಡರೆ ಶೀಘ್ರವಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗುತ್ತೇವೆ. ಈಗಾಗಲೇ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಮಾಡಲು ಕೋವಿಡ್ ಅಡ್ಡಿಪಡಿಸಿತ್ತು. ಇದೀಗ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಕಾರ್ಯಕ್ರಮವನ್ನು ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನದೊಂದಿಗೆ ಹಬ್ಬದ ರೀತಿಯಲ್ಲಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ sಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿ ಹಾಗೂ ಶಿಕ್ಷಕ ಸರ್ವೆಪಲ್ಲಿ ಡಾ.ರಾಧಕೃಷ್ಣನ್‌ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಿವೃತ್ತ ಹಿರಿಯ ಶಿಕ್ಷಕ ಶ್ರೀರಾಮಯ್ಯ ಅವರನ್ನು ಅಭಿನಂದಿಸಲಾಯಿತು. ಶಾಲಾ ಶಿಕ್ಷಕರಿಗೆ ಲೇಖನಿ ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.ಈ ವೇಳೆಯಲ್ಲಿ ಅರುಂಧತಿ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಸಿ.ಮುನಿಕೃಷ್ಣಪ್ಪ, ಉಪಾಧ್ಯಕ್ಷರಾದ ಎನ್.ನರಸಿಂಹಮೂರ್ತಿ, ನರಸಿಂಹಮೂರ್ತಿ, ಖಜಾಂಚಿ ಕೆ.ಮಂಜುನಾಥ್, ಕಾರ್ಯದರ್ಶಿ ಡಿ.ಎಂ.ಅನಿಲ್‌ಕುಮಾರ್, ಪದಾಧಿಕಾರಿಗಳಾದ ವೇಣುಗೋಪಾಲ್, ಅಣ್ಣೇಶ್ವರ ರಾಜು, ಮುನಿಕೃಷ್ಣ.ಡಿ, ಎನ್.ವೆಂಕಟಪ್ಪ, ನಿರ್ದೇಶಕರು, ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್, ಶಾಲಾ ಶಿಕ್ಷಕವೃಂದ ಇದ್ದರು.

Be the first to comment

Leave a Reply

Your email address will not be published.


*