ರಾಜ್ಯ ಸುದ್ದಿಗಳು
ಬೆಂಗಳೂರು
ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷಗಳಲ್ಲಿ 6,7 ಮತ್ತು 8 ನೇ ತರಗತಿ ಗಳು ಕೇವಲ ಆನ್ಲೈನ್ ತರಗತಿಗಳಿಗೆ ಸೀಮಿತವಾಗಿದ್ದು. ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ರವರು ಸಭೆಯ ನಂತರ ನಾಳೆಯಿಂದ ರಾಜ್ಯದಲ್ಲಿ 6, 7 ಮತ್ತು 8ನೇ ತರಗತಿ ಗಳು ಪುನರಾರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಾರಂತ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಶೇಕಡ 2 ಕಿಂತ ಕಡಿಮೆಯಾದಲ್ಲಿ ಅಲ್ಲಿಯೂ ಸಹ ಶಾಲೆಗಳು ಪ್ರಾರಂಭಿಸಲು ಮುಂದಾಗುತ್ತೇವೆ ಸದ್ಯದ ಪರಿಸ್ಥಿತಿಯಲ್ಲಿ 6,7 ಮತ್ತು 8 ನೇ ತರಗತಿಗಳನ್ನು ಪ್ರಾರಂಭ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕೊರೋನಾ ಸ್ಥಿತಿಗತಿಯ ಆಧಾರದ ಮೇಲೆ ಒಂದರಿಂದ 5ನೇ ತರಗತಿ ಪ್ರಾರಂಭದ ಬಗ್ಗೆ ಕೂಡ ಚಿಂತನೆ ನಡೆಸಲಾಗುವುದುಎಂದು ತಿಳಿಸಿದರು.
Be the first to comment